ಕರ್ನಾಟಕ

karnataka

ETV Bharat / bharat

ಡೆಲ್ಲಿ ಏರ್​​ಪೋರ್ಟ್​​ನ ಬ್ರಿಡ್ಜ್​ ಕೆಳಗೆ ಸಿಕ್ಕಿಕೊಂಡ ಏರ್​ ಇಂಡಿಯಾ ವಿಮಾನ.. ವಿಡಿಯೋ ನೋಡಿ - ಡೆಲ್ಲಿ ಏರ್​​ಪೋರ್ಟ್​​ನ ಬ್ರಿಡ್ಜ್​

ರೆಕ್ಕೆಗಳು ಇಲ್ಲದಿರುವ ಹಾಳಾಗಿರುವ ವಿಮಾನ ಇದಾಗಿದ್ದು, ವಿಮಾನ ನಿಲ್ದಾಣದಿಂದ ಬೇರೊಂದು ಪ್ರದೇಶಕ್ಕೆ ಸಾಗಾಣೆ ಮಾಡಲು ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬ್ರಿಡ್ಜ್​ ಕೆಳಗೆ ಸಿಲುಕಿದೆ. ರಸ್ತೆಯಲ್ಲಿ ಒಂದು ಬದಿಯಲ್ಲಿ ವಿಮಾನ ಸಿಲುಕೊಂಡ ಕಾರಣ ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು..

Air India
Air India

By

Published : Oct 4, 2021, 6:40 PM IST

Updated : Oct 4, 2021, 7:21 PM IST

ನವದೆಹಲಿ :ಏರ್​​ ಇಂಡಿಯಾಗೆ ಸೇರಿದ್ದ ವಿಮಾನವೊಂದು ದೆಹಲಿಯ ಏರ್​​​​ಪೋರ್ಟ್​​ ಬಳಿಯ ಬ್ರಿಡ್ಜ್​ ಕೆಳಗೆ ಸಿಕ್ಕಿ ಹಾಕಿಕೊಂಡಿರುವ ಘಟನೆ ನಡೆದಿದೆ. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್​ ಆಗ್ತಿದೆ. ದೆಹಲಿ-ಗುರುಗಾಂವ್​​ ಹೆದ್ದಾರಿಯಲ್ಲಿರುವ ಐಜಿಐ ವಿಮಾನ ನಿಲ್ದಾಣದ ಬಳಿಯ ಫ್ಲೈಓವರ್​​ ಕೆಳಗೆ ಏರ್​ ಇಂಡಿಯಾ ವಿಮಾನ ಸಿಲುಕಿದೆ.

ಡೆಲ್ಲಿ ಏರ್​​ಪೋರ್ಟ್​​ನ ಬ್ರಿಡ್ಜ್​ ಕೆಳಗೆ ಏರ್ ಇಂಡಿಯಾ ವಿಮಾನ

ರೆಕ್ಕೆಗಳು ಇಲ್ಲದಿರುವ ಹಾಳಾಗಿರುವ ವಿಮಾನ ಇದಾಗಿದ್ದು, ವಿಮಾನ ನಿಲ್ದಾಣದಿಂದ ಬೇರೊಂದು ಪ್ರದೇಶಕ್ಕೆ ಸಾಗಾಣೆ ಮಾಡಲು ವಾಹನದಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಬ್ರಿಡ್ಜ್​ ಕೆಳಗೆ ಸಿಲುಕಿದೆ. ರಸ್ತೆಯಲ್ಲಿ ಒಂದು ಬದಿಯಲ್ಲಿ ವಿಮಾನ ಸಿಲುಕೊಂಡ ಕಾರಣ ಮತ್ತೊಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು.

ಏನಿದು ಪ್ರಕರಣ?

ಏರ್​ ಇಂಡಿಯಾದ ಹಾಳಾಗಿದ್ದ ವಿಮಾನವೊಂದನ್ನ ಮಾರಾಟ ಮಾಡಲಾಗಿದ್ದು, ವಿಮಾನ ನಿಲ್ದಾಣದಿಂದ ಮಾಲೀಕನಿಂದ ಜಾಗಕ್ಕೆ ಸ್ಥಳಾಂತರ ಮಾಡುತ್ತಿದ್ದ ವೇಳೆ ಬ್ರಿಡ್ಜ್​ ಕೆಳಗೆ ಸಿಲುಕಿಹಾಕಿಕೊಂಡಿದೆ. ಇದಕ್ಕೂ ಏರ್ ಇಂಡಿಯಾಗೂ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ:"ಜಗತ್ತನ್ನ ಬದಲಾಯಿಸಬೇಕಾದರೆ ನಾನು ನನ್ನನ್ನ ಬದಲಾಯಿಸಿಕೊಳ್ಳಬೇಕು": ಡಿವೋರ್ಸ್​ ಬಳಿಕ ಸಮಂತಾ ಪೋಸ್ಟ್​​​

ವಿಮಾನ ಅಪಘಾತಕ್ಕೊಳಗಾಗಿದೆ ಎಂಬ ಸುದ್ದಿ ಹರಿದಾಡಲು ಶುರುವಾಗುತ್ತಿದ್ದಂತೆ ಖುದ್ದಾಗಿ ಟ್ವೀಟ್ ಮಾಡಿರುವ ಏರ್‌ ಇಂಡಿಯಾ ವಿಮಾನಯಾನ ಸಂಸ್ಥೆ, ಇದರಿಂದ ಯಾವುದೇ ರೀತಿಯ ಅಪಘಾತ ಸಂಭವಿಸಿಲ್ಲ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗ್ತಿದ್ದಾಗ ಈ ಘಟನೆ ನಡೆದಿದೆ ಎಂದು ಸ್ಪಷ್ಟನೆ ನೀಡಿದೆ.

Last Updated : Oct 4, 2021, 7:21 PM IST

ABOUT THE AUTHOR

...view details