ಕರ್ನಾಟಕ

karnataka

ETV Bharat / bharat

ರೈತರ ಮೇಲೆ ಕಾರು ಹರಿಸಿದ ಪ್ರಕರಣ: ವಿಡಿಯೋ ಹಂಚಿಕೊಂಡ ಪ್ರಿಯಾಂಕಾ ಗಾಂಧಿ - ರೈತರ ಮೇಲೆ ಕಾರು ಹರಿಸಿದ ಪ್ರಕರಣ

ಉತ್ತರ ಪ್ರದೇಶದ ಲಖಿಂಪುರದಲ್ಲಿ ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಿಡಿಕಾರಿದ್ದಾರೆ.

viral video:  Priyanka Gandhi shares video of car running over farmers in Lakhimpur Kheri
ರೈತರ ಮೇಲೆ ಕಾರು ಹರಿಸಿದ ಪ್ರಕರಣ: ವಿಡಿಯೋ ಹಂಚಿಕೊಂಡ ಪ್ರಿಯಾಂಕಾ ಗಾಂಧಿ

By

Published : Oct 5, 2021, 10:05 AM IST

Updated : Oct 5, 2021, 12:49 PM IST

ಲಖನೌ(ಉತ್ತರ ಪ್ರದೇಶ): ಪ್ರತಿಭಟನಾನಿರತ ರೈತರ ಮೇಲೆ ಕಾರು ಹರಿಸಿದ ಘಟನೆ ದೇಶಾದ್ಯಂತ ವ್ಯಾಪಕ ಟೀಕೆಗೆ ಗುರಿಯಾಗಿದೆ. ಘಟನೆಯ ವಿಡಿಯೋವನ್ನು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

'ರೈತರ ಮೇಲೆ ಕಾರು ಹರಿಸಿ ವ್ಯಕ್ತಿಯನ್ನು ಬಂಧಿಸದೇ ನನ್ನನ್ನು ಯಾಕೆ ಬಂಧಿಸಲಾಯಿತು?. ಮೋದಿ ಸರ್, ಘಟನೆ ನಡೆದು ಸುಮಾರು 28 ಗಂಟೆ ಕಳೆದರೂ ಯಾವುದೇ ಎಫ್​ಐಆರ್​​ ಇಲ್ಲದೇ ನನ್ನನ್ನು ಕಸ್ಟಡಿಯಲ್ಲಿ ಇರಿಸಲಾಗಿದೆ. ಆದರೆ ಅನ್ನದಾತರ ಮೇಲೆ ಕಾರು ಹರಿಸಿದ ವ್ಯಕ್ತಿಯನ್ನು ಇನ್ನೂ ಬಂಧಿಸಲಾಗಿಲ್ಲ ಏಕೆ?' ಎಂದು ಪ್ರಶ್ನಿಸಿದ್ದಾರೆ.

ಭಾನುವಾರ ರಾತ್ರಿ ಪ್ರಿಯಾಂಕಾ ಗಾಂಧಿ ಅವರನ್ನು ಹಿಂಸಾಚಾರ ನಡೆಯುತ್ತಿದ್ದ ಲಖಿಂಪುರ ಖೇರಿ ಜಿಲ್ಲೆಗೆ ಹೋಗುವಾಗ ಸೀತಾಪುರದಲ್ಲಿ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ಬಂಧಿಸಿದ್ದರು.

ಇದನ್ನೂ ಓದಿ:ಲಖಿಂಪುರ ಖೇರಿ ಹಿಂಸಾಚಾರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಹಿನ್ನಡೆ?

Last Updated : Oct 5, 2021, 12:49 PM IST

ABOUT THE AUTHOR

...view details