ಕರ್ನಾಟಕ

karnataka

ETV Bharat / bharat

ವ್ಯಕ್ತಿ ಮೇಲೆ ಯುವತಿ-ಯುವಕರಿಂದ ಅಮಾನವೀಯ ರೀತಿ ಹಲ್ಲೆ: ವಿಡಿಯೋ ವೈರಲ್​ - ಗುರುಗ್ರಾಮ್​ ಕ್ರೈಂ ನ್ಯೂಸ್​

ಉತ್ತರ ಪ್ರದೇಶದ ಗುರುಗ್ರಾಮ್​ನಲ್ಲಿ ನಡೆದಿದೆ ಎನ್ನಲಾಗಿರುವ ವಿಡಿಯೋ ವೈರಲ್​ ಆಗಿದ್ದು, ಇದೀಗ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

Man brutally beaten
Man brutally beaten

By

Published : Mar 15, 2021, 5:11 PM IST

ಗುರುಗ್ರಾಮ್​(ಉತ್ತರ ಪ್ರದೇಶ):ಯುವಕನೋರ್ವನ ಮೇಲೆ ಇಬ್ಬರು ಯುವಕರು ಹಾಗೂ ಯುವತಿ ಸೇರಿ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿರುವ ವಿಡಿಯೋ ಇದೀಗ ವೈರಲ್​ ಆಗಿದ್ದು, ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ.

ಯುವಕನ ಮೇಲೆ ಅಮಾನವೀಯ ರೀತಿ ಹಲ್ಲೆ

ಉತ್ತರ ಪ್ರದೇಶದ ಗುರುಗ್ರಾಮ್​ದಲ್ಲಿ ನಡೆದಿರುವ ಘಟನೆ ಎನ್ನಲಾಗಿದ್ದು, ಇದರಲ್ಲಿ ಇಬ್ಬರು ಯುವಕರು ಹಾಗೂ ಯುವತಿಯರು ಸೇರಿ ವ್ಯಕ್ತಿಯೋರ್ವನ ಮೇಲೆ ಅಮಾನವೀಯ ರೀತಿಯಲ್ಲಿ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹಲ್ಲೆಗೊಳಗಾದ ವ್ಯಕ್ತಿಯ ತಲೆಯಿಂದ ರಕ್ತ ಸಹ ಹರಿಯುತ್ತಿದೆ.

ಇದನ್ನೂ ಓದಿ: ಯುವತಿಯರ ಒಳ ಉಡುಪು ಕದಿಯುವ ವಿಕೃತ ಕಾಮಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ!

ಹಲ್ಲೆಗೊಳಗಾದ ವ್ಯಕ್ತಿಯನ್ನ ಸಂದೀಪ್ ಎಂದು ಗುರುತಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ದೂರು ದಾಖಲು ಮಾಡಲಾಗಿದೆ. ಈಗಾಗಲೇ ಆರೋಪಿಗಳ ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಅವರ ಬಂಧನಕ್ಕಾಗಿ ಬಲೆ ಬೀಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details