ನವದೆಹಲಿ/ ಗಾಜಿಯಾಬಾದ್: ಗಾಜಿಯಾಬಾದ್ನಲ್ಲಿ ರಸ್ತೆ ಮಧ್ಯೆ ನಮಾಜ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 25 ರಿಂದ 30 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದಾರೆ. ಕಲಂ 114 ಉಲ್ಲಂಘನೆಯಾಗಿದೆ ಎಂದು ಎಫ್ಐಆರ್ನಲ್ಲಿ ತಿಳಿಸಲಾಗಿದ್ದು, ಕಲಂ 188ರಡಿ ದೂರು ದಾಖಲಿಸಲಾಗಿದೆ.
ಗಾಜಿಯಾಬಾದ್ನ ಖೋಡಾ ಪ್ರದೇಶದ ದೀಪಕ ವಿಹಾರ್ನಲ್ಲಿ ಘಟನೆ ನಡೆದಿದೆ. ಈ ಪ್ರದೇಶದಲ್ಲಿ ರಸ್ತೆ ಮೇಲೆ ನಮಾಜ್ ಮಾಡಿದ ವಿಡಿಯೋ ವೈರಲ್ ಆಗಿದೆ. ಈ ಬಗ್ಗೆ ಟ್ವಿಟರ್ನಲ್ಲಿ ಪೊಲೀಸರಿಗೆ ದೂರು ನೀಡಲಾಗಿತ್ತು. ದೀಪಕ್ ವಿಹಾರದಲ್ಲಿರುವ ಮಸೀದಿ ಬಳಿಯ 30 ಅಡಿ ರಸ್ತೆಯಲ್ಲಿ ನಮಾಜ್ ಮಾಡಲಾಗಿದೆ ಎಂದು ಹೇಳಲಾಗ್ತಿದೆ. ಬಹುಸಂಖ್ಯಾತರ ಬಾಹುಳ್ಯ ಪ್ರದೇಶವಾಗಿರುವ ಇಲ್ಲಿ ಪದೇ ಪದೆ ರಸ್ತೆಯಲ್ಲಿ ನಮಾಜ್ ಮಾಡಲಾಗುತ್ತಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಇದರ ನಂತರ ಪೊಲೀಸರು ಕ್ರಮಕ್ಕೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.