ಹೈದರಾಬಾದ್:ಪುಟಾಣಿ ಕಂದಮ್ಮ ಆನೆಯೊಂದಿಗೆ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಆನೆಯನ್ನೇ ಜಾರುಬಂಡಿ ಮಾಡಿಕೊಂಡು ಆಡುತ್ತಾ, ಆನೆಗೆ ಸ್ನಾನ ಮಾಡಿಸುತ್ತಾ, ಅದಕ್ಕೆ ಮುತ್ತಿಕ್ಕುತ್ತಾ ಸ್ವಲ್ಪವೂ ಭಯವಿಲ್ಲದೇ ಆ ಮಗು ಗಜರಾಜನೊಂದಿಗೆ ಮಸ್ತಿ ಮಾಡುತ್ತಿರುವ ವಿಡಿಯೋ ಕಂಡು ನೆಟ್ಟಿಗರು ಫಿದಾ ಆಗಿದ್ದಾರೆ.