ಜೆಹಾನಾಬಾದ್(ಬಿಹಾರ): ಮಕ್ಕಳ ಭವಿಷ್ಯ ರೂಪಿಸಬೇಕಾದ ಶಾಲೆಯಲ್ಲೇ ಮಕ್ಕಳ ಕೈಗೆ ಹಾರೆ, ಕೊಡಲಿ ಕೊಟ್ಟು ಕೆಲಸ ಮಾಡಿಸುತ್ತಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಬಿಹಾರದ ಜೆಹಾನಾಬಾದ್ ಜಿಲ್ಲೆಯ ಕಾಕೋ ಬ್ಲಾಕ್ನಲ್ಲಿರುವ ಶಾಲೆಯೊಂದರಲ್ಲಿ ಪುಸ್ತಕ ಪೆನ್ಸಿಲ್ ಹಿಡಿಯಬೇಕಾದ ಮಕ್ಕಳನ್ನು ಬಾಲಕಾರ್ಮಿಕರನ್ನಾಗಿ ಮಾಡಿರುವ ಆರೋಪ ಹೆಡ್ಮಾಸ್ತರ್ ವಿರುದ್ಧ ಕೇಳಿಬಂದಿದೆ.
ಮುಖ್ಯಶಿಕ್ಷಕರ ಭಯದಿಂದ ವಿದ್ಯಾರ್ಥಿಗಳು ಏನನ್ನೂ ಮಾತನಾಡದೆ, ಅವರು ಹೇಳಿದ ಕೆಲಸವನ್ನು ಮಾಡಿದ್ದಾರೆ. ಕೆಲಸ ಮಾಡದೇ ಇದ್ದಾಗ ತನಗೂ ಥಳಿಸಿದ್ದಾರೆ ಎಂದು ಬಾಲಕನೋರ್ವ ಹೇಳುವ ಸಂಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಶಾಲೆಯಲ್ಲಿ ಕೆಲಸ ಮಾಡುತ್ತಿರುವ ಮಕ್ಕಳು ಓದುವ ಬದಲು ಕೆಲಸ: ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಓದಲು ಕಳುಹಿಸಿದರೆ ಶಾಲೆಯಲ್ಲಿ ಮಕ್ಕಳ ಕೈಯಲ್ಲಿ ಮರ ಕಡಿಯುವುದು, ಗುಂಡಿ ತೋಡುವುದು ಮುಂತಾದ ಕೆಲಸಗಳನ್ನು ಶಾಲೆಯ ಮುಖ್ಯಶಿಕ್ಷಕರು ಮಾಡಿಸುತ್ತಾರೆ ಎನ್ನಲಾಗ್ತಿದೆ. ಶಾಲೆಯ ಪಕ್ಕದ ತಾರಸಿಯಿಂದ ಯಾರೋ ಈ ವಿಡಿಯೋ ಮಾಡಿದ್ದು, ಅದರಲ್ಲಿ ಮಕ್ಕಳು ಈ ಎಲ್ಲಾ ಕೆಲಸಗಳನ್ನು ಮಾಡುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ.
ಇಟ್ಟಿಗೆಗಳನ್ನು ಕೊಂಡುಹೋಗಲು ಹೇಳಲಾಗುತ್ತದೆ. ನಾವು ಎಲ್ಲರೂ ಒಟ್ಟಾಗಿ ಮಾಡುತ್ತೇವೆ. ಬಹಳಷ್ಟು ಬಾರಿ ನಾವು ಕೆಲಸ ಮಾಡುವುದಿಲ್ಲ ಎಂದು ವಿರೋಧಿಸಿದ್ದೂ ಇದೆ ಎಂದು ಶಾಲೆಯ ವಿದ್ಯಾರ್ಥಿಯೋರ್ವ ಹೇಳುತ್ತಾನೆ.
ಶಾಲೆಗೆ ಜಿಲ್ಲಾಧಿಕಾರಿ ಭೇಟಿ: ವಿಡಿಯೋ ವೈರಲ್ ಆಗುತ್ತಿದ್ದಂತೆ ಜಿಲ್ಲಾ ನ್ಯಾಯಾಧೀಶ ರಿಷಿ ಪಾಂಡೆ ಶಾಲೆಗೆ ಭೇಟಿ ನೀಡಿದ್ದು, ಪರಿಶೀಲಿಸಿದ್ದಾರೆ. ಇವರೊಂದಿಗೆ ಬ್ಲಾಕ್ ಶಿಕ್ಷಣಾಧಿಕಾರಿ ನರೇಂದ್ರ ಕುಮಾರ್ ಕೂಡ ಶಾಲೆಗೆ ಭೇಟಿ ನೀಡಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ, ಮುಖ್ಯಶಿಕ್ಷಕರು ವ್ಯಾಸಂಗದ ಹೆಸರಿನಲ್ಲಿ ಮಕ್ಕಳನ್ನು ಪ್ರತಿದಿನ ಯಾವುದಾದರೊಂದು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ ಎಂದು ಪೋಷಕರು ತಿಳಿಸಿದ್ದಾರೆ.
ಈ ಹಿಂದೆಯೂ ಈ ಬಗ್ಗೆ ಹಲವು ಬಾರಿ ದೂರು ಬಂದಿದ್ದು, ಸಂಪೂರ್ಣ ತನಿಖೆ ನಡೆಸುತ್ತಿದ್ದೇನೆ. ಇದರಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಕ್ಕಳು ಮತ್ತು ಮುಖ್ಯಶಿಕ್ಷಕರಿಂದಲೂ ಹೇಳಿಕೆ ತೆಗೆದುಕೊಳ್ಳಲಾಗಿದೆ. ಮಕ್ಕಳ ಪೋಷಕರನ್ನೂ ವಿಚಾರಿಸಲಾಗಿದೆ. ಈ ರೀತಿ ಮಕ್ಕಳನ್ನು ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಸರಿಯಲ್ಲ ಎಂದು ನ್ಯಾಯಾಧೀಶ ರಿಷಿ ಪಾಂಡೆ ಹೇಳಿದ್ದಾರೆ.
ಇದನ್ನೂ ಓದಿ : ಯಾರೋ ಮಾಡಿದ್ದ ಸಾಲಕ್ಕೆ ಸಚಿವ, ಮಾಜಿ ಸಚಿವರಿಗೆ ಕರೆ ಮಾಡಿ ಕಿರುಕುಳ.. ಲೋನ್ ಆ್ಯಪ್ ಸಿಬ್ಬಂದಿ ಅರೆಸ್ಟ್!