ಭರತ್ಪುರ(ರಾಜಸ್ಥಾನ):ವಿಜ್ಞಾನ, ತಂತ್ರಜ್ಞಾನ ಹಾಗೂ ಶಿಕ್ಷಣದಲ್ಲಿ ನಾವು ಇನ್ನಿಲ್ಲದ ಯಶಸ್ಸು ಸಾಧಿಸಿದ್ದೇವೆ. ಆದರೆ, ದೇಶದ ಕೆಲವೊಂದು ಗ್ರಾಮೀಣ ಪ್ರದೇಶಗಳಲ್ಲಿನ ಜನರು ಇಂದಿಗೂ ಮೂಢನಂಬಿಕೆ ಹಾದಿ ತುಳಿಯುತ್ತಿರುವುದು ಕಂಡು ಬರುತ್ತದೆ. ಸದ್ಯ ಅಂತಹದೊಂದು ಘಟನೆ ರಾಜಸ್ಥಾನದ ಭರತ್ಪುರದಲ್ಲಿ ನಡೆದಿದೆ.
ನಾಗ್ಲಾ ಭೋಲಾ ಎಂಬ ಹಳ್ಳಿಯಲ್ಲಿ ಕುಡುಕನೊಬ್ಬನ ದೇಹದಲ್ಲಿ ಭೂತವಿದೆ ಎಂದು ಆತನ ಮೇಲೆ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಅದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಂಠಪೂರ್ತಿ ಕುಡಿದ ವ್ಯಕ್ತಿಯೊಬ್ಬ ವಿಚಿತ್ರವಾಗಿ ಮಾತನಾಡಲು ಆರಂಭಿಸುತ್ತಿದ್ದಂತೆ ಆತನನ್ನ ಕುಟುಂಬಸ್ಥರು ಮಹಿಳಾ ತಂತ್ರವಾದಿ ಬಳಿ ಕರೆದುಕೊಂಡು ಬಂದಿದ್ದಾರೆ.