ಕರ್ನಾಟಕ

karnataka

ETV Bharat / bharat

ಕೈಯಲ್ಲಿ ಚಪ್ಪಲಿ ಹಿಡಿದು ಕಾಡಾನೆ ಓಡಿಸಲು ಯತ್ನಿಸಿದ ಯುವಕ: ವಿಡಿಯೋ ವೈರಲ್​ - ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್

ಯುವಕನೊಬ್ಬ ಕಾಡಾನೆ ಓಡಿಸಲು ಕೈಯಲ್ಲಿ ಚಪ್ಪಲಿ ಹಿಡಿದುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗ್ತಿದೆ.

Youths confront elephant with sandal  Heroics of Stupidity  VIRAL VIDEO  escapes life threat  ಕಾಡಾನೆ ಓಡಿಸಲು ಯತ್ನ  ಕಾಡಾನೆ ಓಡಿಸಲು ಯತ್ನಿಸಿದ ಯುವಕ  ಕೈಯಲ್ಲಿ ಚಪ್ಪಲಿ ಹಿಡಿದು  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್  ಆನೆ ಮತ್ತು ಮಾನವ ನಡುವಿನ ಸಂಘರ್ಷ
ಕೈಯಲ್ಲಿ ಚಪ್ಪಲಿ ಹಿಡಿದು ಕಾಡಾನೆ ಓಡಿಸಲು ಯತ್ನಿಸಿದ ಯುವಕ

By ETV Bharat Karnataka Team

Published : Dec 8, 2023, 10:18 AM IST

ಕೈಯಲ್ಲಿ ಚಪ್ಪಲಿ ಹಿಡಿದು ಕಾಡಾನೆ ಓಡಿಸಲು ಯತ್ನಿಸಿದ ಯುವಕ

ಜೋರ್ಹತ್, ಅಸ್ಸೋಂ : ಅಸ್ಸೋಂ ರಾಜ್ಯವು ತನ್ನ ಅನೇಕ ಅರಣ್ಯ ಮೀಸಲುಗಳಲ್ಲಿ ಹೆಚ್ಚಿನ ಸಂಖ್ಯೆಯ ಕಾಡು ಆನೆಗಳನ್ನು ಹೊಂದಿದೆ. ಈ ರಾಜ್ಯದಲ್ಲಿ ಆನೆ ಮತ್ತು ಮಾನವ ನಡುವಿನ ಸಂಘರ್ಷದ ಘಟನೆಗಳು ಸಾಮಾನ್ಯ. ಆಗಾಗ ಜನವಸತಿ ಪ್ರದೇಶಗಳ ಮೇಲೆ ಕಾಡಾನೆಗಳು ದಾಳಿ ಮಾಡುತ್ತವೆ. ಇದರಿಂದ ರಕ್ಷಿಸಿಕೊಳ್ಳಲು ಸ್ಥಳೀಯರು ಬೆಂಕಿ ಪಂಜಿನಿಂದ ಆನೆಗಳನ್ನು ಓಡಿಸುವುದು ಅಥವಾ ಪಟಾಕಿ ಸಿಡಿಸುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ಚಪ್ಪಲಿ ಹಿಡಿದು ಕಾಡಾನೆಯನ್ನು ಓಡಿಸಲು ಯತ್ನಿಸಿದ್ದು, ಸದ್ಯ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಯುವಕನೊಬ್ಬ ಕೈಯಲ್ಲಿ ಚಪ್ಪಲಿ ಹಿಡಿದುಕೊಂಡು ಕಾಡು ಆನೆಯನ್ನು ಹಿಂಬಾಲಿಸಿಕೊಂಡು ಹೋಗುತ್ತಿರುವುದು ಬಹುಶಃ ಇದೇ ಮೊದಲ ಎನಿಸುತ್ತದೆ. ಈ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್ ಆಗಿದೆ. ಆನೆ ಮತ್ತು ಮಾನವನ ನಡುವಿನ ಸಂಘರ್ಷದಲ್ಲಿ ಹಲವು ಜೀವಗಳು ಬಲಿಯಾಗಿರುವ ಮಧ್ಯೆ ಈ ಇಬ್ಬರು ಯುವಕರು ಆನೆ ಎದುರು ಮೂರ್ಖತನ ಪ್ರದರ್ಶಿಸಿರುವ ದೃಶ್ಯ ಸದ್ಯ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಅಸ್ಸಾಂನ ಜೋರ್ಹತ್ ನಗರದ ಗಿಬ್ಬನ್ ವನ್ಯಜೀವಿ ಅಭಯಾರಣ್ಯದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಆಹಾರ ಹರಿಸಿ ಗಜರಾಜ ಕಾಡಿನಿಂದ ನಾಡಿಗೆ ಬಂದಿದ್ದಾನೆ. ಈ ವೇಳೆ ಕಾಡಾನೆ ಕಂಡು ಸ್ಥಳೀಯರು ಮತ್ತು ಸುತ್ತ-ಮುತ್ತಲಿನ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದಾರೆ. ಈ ವೇಳೆ ಆನೆಯನ್ನು ಮತ್ತೆ ಕಾಡಿಗೆ ಕಳುಹಿಸಲು ಗ್ರಾಮಸ್ಥರು ಯತ್ನಿಸಿದ್ದಾರೆ. ಇದರ ಮಧ್ಯೆ ಕೆಲ ಯುವಕರು ಆನೆ ಎದರು ಪುಂಡಾಟ ಪ್ರದರ್ಶಿಸಿದ್ದಾರೆ. ಯುವಕನೊಬ್ಬ ಕೈಯಲ್ಲಿ ಚಪ್ಪಲಿ ಹಿಡಿದು ಕಾಡಾನೆ ಓಡಿಸಲು ಯತ್ನಿಸಿದ್ದಾನೆ. ಈ ವೇಳೆ ಆನೆ ರೊಚ್ಚಿಗೆದ್ದು ಯುವಕ ಮೇಲೆ ದಾಳಿ ಮಾಡಲು ಮುಂದಾಗಿದೆ. ಆದ್ರೆ ಯುವಕ ಸ್ಥಳದಲ್ಲಿದ್ದ ಕಂದಕಕ್ಕೆ ಇಳಿದಿದ್ದಾನೆ. ಹೀಗೆ ಅನೇಕ ಬಾರಿ ಯುವಕ ಮತ್ತು ಆನೆ ಮಧ್ಯೆ ಘಟನೆಗಳು ಮರುಕಳಿಸಿವೆ. ಬಳಿಕ ಆನೆ ತನ್ನ ಪಾಡಿಗೆ ಮುಂದೆ ಹೆಜ್ಜೆ ಹಾಕುತ್ತಲೇ ಸಾಗಿತು. ಈ ದೃಶ್ಯವೆಲ್ಲವೂ ಕೆಲವರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

ಆನೆ ದಾಳಿಗೆ ಪ್ರಾಣಬಿಟ್ಟ 2657 ಜನ: ಸಂಸತ್ತಿನ ಚಳಿಗಾಲದ ಅಧಿವೇಶದಲ್ಲಿ ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ರಾಜ್ಯ ಸಚಿವ ಅಶ್ವಿನಿ ಕುಮಾರ್ ಚೌಬೆ ಅವರು ಕಳೆದ ಐದು ವರ್ಷದಲ್ಲಿ ಆನೆ ದಾಳಿಯಿಂದ 2657 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. (ಸಂಪೂರ್ಣ ಸುದ್ದಿಗಾಗಿ ಈ ಲಿಂಕ್​ ಅನ್ನು ಕ್ಲಿಕ್​ ಮಾಡಿ:5 ವರ್ಷಗಳಲ್ಲಿ ಹುಲಿ ದಾಳಿಗೆ 293, ಆನೆ ದಾಳಿಗೆ 2,657 ಜನ ಸಾವು: 3 ವರ್ಷದಲ್ಲಿ 400 ಸಿಂಹಗಳ ಮರಣ!)

ABOUT THE AUTHOR

...view details