ಕಡಲೂರು(ತಮಿಳುನಾಡು): ಚಿದಂಬರಂನ ಬಸ್ ನಿಲ್ದಾಣವೊಂದರಲ್ಲಿ ಶಾಲಾ ವಿದ್ಯಾರ್ಥಿನಿಯೊಬ್ಬರಿಗೆ ಕಾಲೇಜು ವಿದ್ಯಾರ್ಥಿಯೊಬ್ಬ ತಾಳಿ ಕಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಮವಸ್ತ್ರದಲ್ಲಿರುವ ಶಾಲಾ ಬಾಲಕಿಯೊಬ್ಬಳು ಕಾಲೇಜು ವಿದ್ಯಾರ್ಥಿಯೊಂದಿಗೆ ಚಿದಂಬರಂನಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಸ್ ನಿಲ್ದಾಣದಲ್ಲಿ ಕುಳಿತು ತಾಳಿ ಕಟ್ಟಿಸಿಕೊಳ್ಳುತ್ತಿರುವುದು ವಿಡಿಯೋದಲ್ಲಿದೆ.
ವಿದ್ಯಾರ್ಥಿ ತನ್ನ ಜೇಬಿನಿಂದ ತಾಳಿ ದಾರವನ್ನು ತೆಗೆದು ಬಾಲಕಿಯ ಕುತ್ತಿಗೆಗೆ ಕಟ್ಟುತ್ತಿರುವ ದೃಶ್ಯವನ್ನು ಕೆಲವರು ಮೊಬೈಲ್ ಮೂಲಕ ರೆಕಾರ್ಡ್ ಮಾಡಿದ್ದಾರೆ. ಇದಿಷ್ಟೇ ಅಲ್ಲದೇ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಅವರ ಮೇಲೆ ಹೂ ಹಾಕಿ ಆಶೀರ್ವಾದ ಮಾಡಿದ್ದಾರೆ.