ಕರ್ನಾಟಕ

karnataka

VIRAL PIC: ಪಿಎಚ್​ಡಿ ಮಾಡ್ತಿರುವೆ.. ಪ್ಲೀಸ್ ಡೋಂಟ್ ಡಿಸ್ಟರ್ಬ್!

ಕೆಲವರು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸದೆ ಕಾಲಹರಣ ಮಾಡುತ್ತಾರೆ. ಈಗ ಅದನ್ನು ಮುಗಿಸುವ ಅರ್ಜೆಂಟ್ ಏನಿಲ್ಲ, ಆಮೇಲೆ ಮಾಡಿದರಾಯ್ತು ಅಂತ ತಮಗೇ ತಾವೇ ಸಮಾಧಾನ ಮಾಡಿಕೊಳ್ತಾರೆ. ಇದು ಯಾವಾಗಲಾದರೊಮ್ಮೆ ಆದರೆ ಪರವಾಗಿಲ್ಲ. ಆದರೆ, ಇದೇ ಅಭ್ಯಾಸವಾದರೆ ಹಲವು ಸಮಸ್ಯೆಗಳು ಎದುರಾಗುತ್ತವೆ.

By

Published : Oct 7, 2022, 12:21 PM IST

Published : Oct 7, 2022, 12:21 PM IST

VIRAL PIC: Doing PhD Please don't disturb!
VIRAL PIC: ಪಿಎಚ್​ಡಿ ಮಾಡ್ತಿರುವೆ.. ಪ್ಲೀಸ್ ಡೋಂಟ್ ಡಿಸ್ಟರ್ಬ್!

ಹೈದರಾಬಾದ್​​:ನಾನು ನನ್ನ ಪಿಎಚ್​ಡಿ ಅಧ್ಯಯನ ಮಾಡುತ್ತಿರುವೆ. ಹೀಗಾಗಿ ಯಾರೂ ನನ್ನನ್ನು ಮಾತನಾಡಿಸಬೇಡಿ.. ಹೀಗಂತ ಓರ್ವ ಪಿಎಚ್​ಡಿ ವಿದ್ಯಾರ್ಥಿ ತನ್ನ ಕ್ಯಾಬಿನ್ ಮೇಲೆ ಬೋರ್ಡ್​ ಹಾಕಿದ್ದಾನೆ. ಅಷ್ಟಕ್ಕೂ ಏನಾದರೂ ಮುಖ್ಯ ವಿಷಯವಿದ್ದರೆ ಮೇಲ್ ಮಾಡಿ ಅಂತ ಬೇರೆ ಬರೆದಿದ್ದಾನೆ. ಸ್ವೀಟ್ ಬಿಂಗ್​ಹ್ಯಾಮ್ ಹೆಸರಿನ ಪ್ರಾಧ್ಯಾಪಕರೊಬ್ಬರು ಇದರ ಫೋಟೊ ತೆಗೆದು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ. ಈಗ ಈ ಫೋಟೊ ಸಖತ್ ವೈರಲ್ ಆಗ್ತಿದೆ.

ಕೆಲವರು ಸಮಯಕ್ಕೆ ಸರಿಯಾಗಿ ಕೆಲಸ ಮುಗಿಸದೇ ಕಾಲಹರಣ ಮಾಡುತ್ತಾರೆ. ಈಗ ಅದನ್ನು ಮುಗಿಸುವ ಅರ್ಜೆಂಟ್ ಏನಿಲ್ಲ, ಆಮೇಲೆ ಮಾಡಿದರಾಯ್ತು ಅಂತ ತಮಗೇ ತಾವೇ ಸಮಾಧಾನ ಮಾಡಿಕೊಳ್ತಾರೆ. ಇದು ಯಾವಾಗಲಾದರೊಮ್ಮೆ ಆದರೆ ಪರವಾಗಿಲ್ಲ. ಆದರೆ, ಇದೇ ಅಭ್ಯಾಸವಾದರೆ ಹಲವು ಸಮಸ್ಯೆಗಳು ಎದುರಾಗುತ್ತವೆ. ವಿದ್ಯಾರ್ಥಿ ಹಂತದಲ್ಲಿ ಇದರ ಪರಿಣಾಮ ಹೆಚ್ಚು.

ಅದರಲ್ಲೂ ಸಂಶೋಧನೆ ಮಾಡುವವರಿಗೆ ಸಮಯ ನಿರ್ವಹಣೆ ಬಹಳ ಮುಖ್ಯ. ಯಾರೇ ನಿಮಗೆ ಮಧ್ಯದಲ್ಲಿ ಅಡ್ಡಿಪಡಿಸಿದರೂ ಅಥವಾ ಫೋನ್ ಕರೆಗಳಿಂದ ನಿಮಗೆ ಕಿರಿಕಿರಿಯುಂಟು ಮಾಡಿದರೆ ಏಕಾಗ್ರತೆಯ ಕೊರತೆಯಾಗಿ ಸರಿಯಾದ ಫಲಿತಾಂಶ ಸಿಗದಂತೆ ಆಗಬಹುದು. ಸಾಮಾನ್ಯವಾಗಿ ಕಷ್ಟದ ಕೆಲಸಗಳನ್ನು ಮಾಡಲು ಮನಸ್ಸು ಕೂಡ ಒಪ್ಪುವುದಿಲ್ಲ. ಕೆಲಸ ಮುಂದೂಡುವ ಅಭ್ಯಾಸ ಹೊಂದಿರುವ ಜನರಿಗೆ ಒಂದಿಷ್ಟು ಡಿಸ್ಟರ್ಬ್ ಆದರೆ ಅವರು ಆ ಕೆಲಸವನ್ನೇ ಮಾಡಲ್ಲ.

ಈ ಸಮಸ್ಯೆಯಿಂದ ಪಾರಾಗಲು ಪಿಎಚ್ ಡಿ ಮಾಡುತ್ತಿರುವ ವಿದ್ಯಾರ್ಥಿ ವಿನೂತನವಾಗಿ ಯೋಚಿಸಿದ್ದಾನೆ. ಆತ ತಾನು ಸಂಶೋಧನೆಯ ಅಧ್ಯಯನ ಮಾಡುತ್ತಿದ್ದ ಕ್ಯಾಬಿನ್ ಮೇಲೆ ಒಂದು ಪೇಪರ್ ಅಂಟಿಸಿದ್ದಾನೆ.

ಅದರಲ್ಲಿ ಹೀಗೆ ಬರೆದಿದೆ - ದಯವಿಟ್ಟು ನನ್ನೊಂದಿಗೆ ಮಾತನಾಡಬೇಡಿ. ನಾನು ಪಿಎಚ್‌ಡಿ ಮೇಲೆ ಕೆಲಸ ಮಾಡುತ್ತಿದ್ದೇನೆ. ಒಮ್ಮೆ ನಾನು ಮಾತನಾಡಲು ಪ್ರಾರಂಭಿಸಿದರೆ ನನ್ನ ಮಾತು ಮುಗಿಯುವುದಿಲ್ಲ. ನಾನು ಭಯಂಕರ ಕೆಲಸ ಮುಂದೂಡುವ ಪ್ರವೃತ್ತಿಯವನಾಗಿದ್ದೇನೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ನಾನು ವಿಷಯಗಳನ್ನು ಮುಂದೂಡುತ್ತೇನೆ. ನಿಮಗೆ ಅರ್ಜೆಂಟ್ ಇದ್ದರೆ ಇಮೇಲ್ ಕಳುಹಿಸಿ.

ಸ್ಟೀವ್ ಬಿಂಗ್‌ಹ್ಯಾಮ್ ಎಂಬ ಪ್ರೊಫೆಸರ್ ಈ ಚಿತ್ರವನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ ನಂತರ ಇದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇದನ್ನೂ ಓದಿ:ಜರ್ಮನಿಯ ವಿವಿಗೆ ಭಾರತದ ಮೊದಲ ಪಿಹೆಚ್​ಡಿ ವಿದ್ಯಾರ್ಥಿನಿಯಾಗಿ ಪ್ರೀತಿ ಸಾಹೊ ಆಯ್ಕೆ

ABOUT THE AUTHOR

...view details