(ಮಧ್ಯಪ್ರದೇಶ):ಅದೆಷ್ಟೋ ನಿರ್ಗತಿಕರು ತಮ್ಮ ದೈನಂದಿನ ಅಗತ್ಯತೆಗಳನ್ನು ಪೂರೈಸಿಕೊಳ್ಳಲು ಕೊನೆಯ ಮಾರ್ಗವಾಗಿ ಭಿಕ್ಷಾಟನೆಗೆ ಮುಂದಾಗುತ್ತಾರೆ. ಆದರೆ ಎಲ್ಲಾ ಭಿಕ್ಷಾಟನೆ ಪ್ರಕರಣಗಳಲ್ಲಿ ಹಾಗೆ ಇರಬೇಕೆಂದಿಲ್ಲ. ಇಂದೋರ್ನಲ್ಲಿ ನಿರ್ಗತಿಕರಿಗೆ ಮೀಸಲಾಗಿರುವ ಆಶ್ರಯ ಮನೆಯಲ್ಲಿ (ಪುನರ್ವಸತಿ ಶಿಬಿರ) ಆರೈಕೆ ಮಾಡಲಾಗುತ್ತಿರುವ ಭಿಕ್ಷುಕ ರಮೇಶ್ ಯಾದವ್ ಕೋಟ್ಯಧಿಪತಿಯಂತೆ.
ಹೌದು, ರಮೇಶ್ ಯಾದವ್ ಕೋಟಿ-ಕೋಟಿ ಮೌಲ್ಯದ ಆಸ್ತಿಯನ್ನು ಹೊಂದಿದ್ದರೂ ಕೂಡ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು. ಎನ್‌ಜಿಒ ಕಾರ್ಯಕರ್ತರು ಅವರನ್ನು ಕಂಡು ಆಶ್ರಯ ಮನೆಗೆ ಕರೆತಂದಿದ್ದಾರೆ. ನಂತರ ಎನ್‌ಜಿಒ ಕಾರ್ಯಕರ್ತರು ಅವರ ಕುಟುಂಬವನ್ನು ಸಂಪರ್ಕಿಸಿದಾಗ, ರಮೇಶ್ ಅವರು ದೊಡ್ಡ ಬಂಗಲೆ ಮತ್ತು ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆಂಬುದನ್ನು ತಿಳಿದು ಒಂದೊಮ್ಮೆ ಬೆರಗಾಗಿದ್ದಾರೆ.