ಕರ್ನಾಟಕ

karnataka

ETV Bharat / bharat

ಮ್ಯಾನ್ಮಾರ್​ನ ಅಕ್ರಮ ವಲಸಿಗರಿಂದ ಮಣಿಪುರದಲ್ಲಿ ಹಿಂಸಾಚಾರ: ಮೆತೈ ಸಮುದಾಯ ಆರೋಪ - ಪೀಪಲ್ಸ್​ ಅಲೆಯನ್ಸ್ ಫಾರ್​ ಪೀಸ್​ ಅಂಡ್​ ಪ್ರೊಗ್ರೆಸ್​

ಮಣಿಪುರದಲ್ಲಿ ಭುಗಿಲೆದ್ದಿದ್ದ ಹಿಂಸಾಚಾರ ಇದೀಗ ನಿಯಂತ್ರಣಕ್ಕೆ ಬಂದಿದೆ. ಭಾರತ-ಮ್ಯಾನ್ಮಾರ್​ರ ಗಡಿ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸಲಾಗಿದೆ.

Violence in Manipur by illegal immigrants from Myanmar; Metai community accused
Violence in Manipur by illegal immigrants from Myanmar; Metai community accused

By

Published : May 10, 2023, 11:59 AM IST

ನವದೆಹಲಿ: ಮ್ಯಾನ್ಮಾರ್​​ನಿಂದ ಅಕ್ರಮವಾಗಿ ವಲಸೆ ಬರುತ್ತಿರುವರಿಂದಲೇ ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದಿದೆ ಎಂದು ಪೀಪಲ್ಸ್​ ಅಲೆಯನ್ಸ್ ಫಾರ್​ ಪೀಸ್​ ಅಂಡ್​ ಪ್ರೊಗ್ರೆಸ್​ ಮಣಿಪುರ ಮತ್ತು ದೆಹಲಿ ಮಣಿಪುರ ಆರೋಪಿಸಿದೆ. ಮಣಿಪುರ ಹಿಂಸಾಚಾರವನ್ನು ಅತ್ಯಂತ ಯೋಜಿತ ಪಿತೂರಿ ಮೂಲಕ ನಡೆಸಲಾಗಿದೆ. ಮ್ಯಾನ್ಮಾರ್​​ದಿಂದ ಅಕ್ರಮವಾಗಿ ಬಂದ ಕುಕಿ ಸಮುದಾಯದ ಜನರು ಕೇಂದ್ರ ಸರ್ಕಾರದಲ್ಲಿ ಅಕ್ರಮವಾಗಿ ಉದ್ಯೋಗ ಪಡೆದಿದ್ದಾರೆ ಎಂದು ದೆಹಲಿ ಮಣಿಪುರಿ ಸೊಸೈಟಿ ಮತ್ತು ಜವಹಾರ್​ ಲಾಲ್​ ನೆಹರು ಯುನಿವರ್ಸಿಟಿಯ ಪ್ರೊಫೆಸರ್​​ ಭಗತ್​ ಒನಿಮ್​ ದೂರಿದ್ದಾರೆ.

ರಾಜ್ಯದ ಮೆತೈ ಸಮುದಾಯ ಪರ ಪೀಪಲ್ಸ್​ ಅಲೆಯನ್ಸ್ ಫಾರ್​ ಪೀಸ್​ ಅಂಡ್​ ಪ್ರೊಗ್ರೆಸ್​ ಮಣಿಪುರ ಮತ್ತು ದೆಹಲಿ ಮಣಿಪುರ ವಾದಿಸಿದ್ದಾರೆ. ಭಾರತೀಯ ಜನತಾ ಪಕ್ಷದ ಸರ್ಕಾರ ರಾಜ್ಯದಲ್ಲಿ ಡ್ರಗ್​​ ಮಾಫಿಯಾದ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಡ್ರಗ್​​ ಮಾಫಿಯಾ ಈ ಹಿಂಸಾಚಾರದಲ್ಲಿ ಕ್ರಿಯಾಶೀಲವಾಗಿದೆ. ಮಣಿಪುರ ಹಿಂಸಾಚಾರದಲ್ಲಿ ಇವರ ಪಾತ್ರ ದೊಡ್ಡದು ಎಂದು ಒನಿಮ್​ ತಿಳಿಸಿದರು.

ಬುಡಕಟ್ಟು ಸ್ಥಾನಮಾನಕ್ಕೆ ಒತ್ತಾಯ: ಮಣಿಪುರ ಚುನಾವಣಾ ರಾಜಕೀಯದಲ್ಲಿ ಕುಕಿ ಸಮುದಾಯ ಪ್ರಭಾವಶಾಲಿಯಾಗಿದೆ ಎಂಬುದನ್ನು ಒಪ್ಪಿದ ಒನಿಮ್​, ಕುಕಿಗಳು ಬೇರೆ ದೇಶದಿಂದ ಬಂದು ತಮ್ಮನ್ನು ತಾವು ಇಲ್ಲಿನ ಮತದಾರರು ಎಂದು ಗುರುತಿಸಿಕೊಂಡಿದ್ದಾರೆ. ಅಲ್ಲದೇ, ಇಲ್ಲಿ ಇತರರ ಮೇಲೆ ಪ್ರಾಬಲ್ಯ ಮೆರೆಯಲು ಮುಂದಾಗಿದ್ದಾರೆ. ಇದೇ ಕಾರಣದಿಂದ ಈ ನಿರ್ದಿಷ್ಟ ಸಮುದಾಯದ ಮಂದಿಯನ್ನು ಗುರಿ ಮಾಡಲಾಗಿದೆ ಎಂದರು.

ಮಣಿಪುರ ಜನಸಂಖ್ಯೆಯಲ್ಲಿ ಮೆತೈ ಸಮುದಾಯದ ಜನರ ಶೇ 53ರಷ್ಟಿದ್ದು, ಇವರು ಇಂಫಾಲ ಕಣಿವೆಯಲ್ಲಿ ಹೆಚ್ಚಾಗಿದ್ದಾರೆ. ನಾಗಾಸ್ ಬುಡಕಟ್ಟು ಮತ್ತು ಕುಕಿಸ್​ ಶೇ 40ರಷ್ಟು ಜನಸಂಖ್ಯೆ ಇಲ್ಲಿ ವಾಸವಾಗಿದ್ದಾರೆ. ಮೆತೈ ಸಮುದಾಯಕ್ಕೆ ಪರಿಶಿಷ್ಟ ಬುಡಕಟ್ಟು ಸ್ಥಾನ ನೀಡಿದರೆ, ಇದರಿಂದ ಕುಕಿ ಸಮುದಾಯಕ ಉದ್ಯೋಗದ ಅಪಾಯ ಎದುರಿಸುವ ಸಾಧ್ಯತೆ ಇದೆ ಎಂಬ ಭಯ ಅವರಲ್ಲಿದೆ. ಇದು ಕೂಡ ಈ ಹಿಂಸಾಚಾರಕ್ಕೆ ಕಾರಣವಾಗಿದೆ ಎಂದಿದ್ದಾರೆ.

ಮೆತೈ ಸಮುದಾಯಕ್ಕೆ ಪರಿಶಿಷ್ಟ ಪಂಗಡದ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆ ವಿರೋಧಿಸಿ 10 ಗಿರಿಶಿಖರ ಜಿಲ್ಲೆಗಳಲ್ಲಿ Tribal Solidarity March ಸಂಘಟಿಸಲಾಯಿತು. ಈ ಬೆನ್ನಲ್ಲೇ ಮೇ 3ರಂದು ಈಶಾನ್ಯ ರಾಜ್ಯದಲ್ಲಿ ಹಿಂಚಾಚಾರ ಭುಗಿಲೆದ್ದಿತು.

'ಸರ್ಕಾರದ ವೈಫಲ್ಯ': ಈ ಹಿಂಸಾಚಾರದಲ್ಲಿ ಅನೇಕ ಮೆತೈ ಸಮುದಾಯದ ಜನರು ಅಪಾಯದಲ್ಲಿ ಸಿಲುಕಿದರು. ಚುರಚಂದಪುರ್​ ಜಿಲ್ಲೆಯಲ್ಲಿ ಹಿಂಸಾಚಾರದ ವೇಳೆ ಸಕಾಲಕ್ಕೆ ಯಾವುದೇ ಸಹಾಯವೂ ಸಿಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. ಸರ್ಕಾರ ಸಮಯಕ್ಕೆ ಸರಿಯಾಗಿ ನಮಗೆ ಸಹಾಯ ಮಾಡಿದ್ದರೆ, ಈ ಹಿಂಸಾಚಾರವನ್ನು ನಾವು ನಿಯಂತ್ರಿಸಬಹುದಿತ್ತು. ಆಗ ಈ ರೀತಿಯ ದೊಡ್ಡ ಅನಾಹುತ ನಡೆಯುತ್ತಿರಲುಲ್ಲ. ರಾಜ್ಯ ಸರ್ಕಾರದ ವೈಫಲ್ಯದಿಂದ ಈ ಅನಾಹುತ ನಡೆಯಿತು ಎಂದು ರುಬಿನಾ ತಿಳಿಸಿದ್ದಾರೆ.

ಮೆತೈ ಸಮುದಾಯದ ಜನರನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಿದ್ದು, ಅವರ ಮನೆಗಳನ್ನು ಹೊಡೆದುರುಳಿಸಿದ್ದಾರೆ ಎಂದಿರುವ ರುಬಿನಾ, ಮಣಿಪುರದಲ್ಲಿ ಶಾಂತಿಯನ್ನು ಪುನರ್​ಸ್ಥಾಪಿಸುವಂತೆ ಮನವಿ ಕೂಡ ಮಾಡಿದ್ದಾರೆ.

ಇದನ್ನೂ ಓದಿ: ಮಣಿಪುರ ಹಿಂಸಾಚಾರವನ್ನು ಮ್ಯಾನ್ಮಾರ್ ಮೂಲದ ಪಿಡಿಎಫ್ ಬೆಂಬಲಿಸಿದೆ: ಎಂಪಿಸಿಸಿ ಅಧ್ಯಕ್ಷ ಆರೋಪ

ABOUT THE AUTHOR

...view details