ಕರ್ನಾಟಕ

karnataka

ETV Bharat / bharat

ಕೋಮು ಗಲಭೆ: ತನಿಖೆಗೆ ನ್ಯಾಯಾಂಗ ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ - ಕೋಮು ಗಲಭೆ

ರಾಮನವಮಿ ಸಂದರ್ಭದಲ್ಲಿ ಹಲವೆಡೆ ನಡೆದಿದ್ದ ಕೋಮು ಗಲಭೆ ಪ್ರಕರಣದ ಕುರಿತು ತನಿಖೆ ನಡೆಸಲು ನ್ಯಾಯಾಂಗ ಆಯೋಗವನ್ನು ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ.

ಕೋಮು ಗಲಭೆ: ತನಿಖೆಗೆ ನ್ಯಾಯಾಂಗ ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ
ಕೋಮು ಗಲಭೆ: ತನಿಖೆಗೆ ನ್ಯಾಯಾಂಗ ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಜಾ

By

Published : Apr 26, 2022, 12:20 PM IST

Updated : Apr 26, 2022, 12:37 PM IST

ನವದೆಹಲಿ: ರಾಮನವಮಿ ಸಂದರ್ಭದಲ್ಲಿ ದೆಹಲಿಯ ಜಹಾಂಗೀರ್‌ಪುರಿ ಮತ್ತು ಇತರ ಏಳು ರಾಜ್ಯಗಳಲ್ಲಿ ಇತ್ತೀಚೆಗೆ ನಡೆದಿದ್ದ ಕೋಮು ಗಲಭೆ, ಹಿಂಸಾಚಾರ ಕುರಿತು ತನಿಖೆ ನಡೆಸಲು ನ್ಯಾಯಾಂಗ ಆಯೋಗ ರಚಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ವಜಾಗೊಳಿಸಿದೆ. ವಕೀಲ ವಿಶಾಲ್ ತಿವಾರಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಎಲ್ ನಾಗೇಶ್ವರ್ ರಾವ್ ಮತ್ತು ಬಿ.ಆರ್ ಗವಾಯಿ ಅವರ ಪೀಠ ವಜಾಗೊಳಿಸಿದೆ.

ವಕೀಲ ವಿಶಾಲ್ ತಿವಾರಿ ಅವರು ತಮ್ಮ ಅರ್ಜಿಯಲ್ಲಿ, ರಾಮನವಮಿ ಸಂದರ್ಭದಲ್ಲಿ ರಾಜಸ್ಥಾನ, ದೆಹಲಿ, ಮಧ್ಯಪ್ರದೇಶ ಮತ್ತು ಗುಜರಾತ್‌ ಸೇರಿ ಕೆಲವೆಡೆ ನಡೆದ ಘರ್ಷಣೆಗಳ ಬಗ್ಗೆ ತನಿಖೆ ನಡೆಸಲು ಕೋರಿದ್ದರು. "ಮಾಜಿ ಸಿಜೆಐ ನೇತೃತ್ವದಲ್ಲಿ ತನಿಖೆ ನಡೆಯಬೇಕೆಂದು ನೀವು ಬಯಸುತ್ತೀರಾ? ಯಾರಾದರೂ ಮುಕ್ತರಾಗಿದ್ದಾರೆಯೇ? ಕಂಡುಹಿಡಿಯಿರಿ. ಇದು ಯಾವ ರೀತಿಯ ಪರಿಹಾರವಾಗಿದೆ. ನ್ಯಾಯಾಲಯದಿಂದ ನೀಡಲಾಗದ ಅಂತಹ ಪರಿಹಾರಗಳನ್ನು ಕೇಳಬೇಡಿ ಎಂದು ಹೇಳಿದ ಸುಪ್ರೀಂ ಕೋರ್ಟ್​ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ:‘ಅಣ್ಣ.. ಪ್ಲೀಸ್ ನನ್ನನ್ನು ಕಾಪಾಡು’... ಸೆಕ್ಸ್​ ರಾಕೆಟ್​ಗೆ ಸಿಲುಕಿದ್ದ ಬಾಲಕಿಯನ್ನು ರಕ್ಷಿಸಿದ ಪೊಲೀಸರು!

ಇನ್ನೂ, ಕೆಲ ರಾಜ್ಯದಲ್ಲಿ ಪ್ರಗತಿಯಲ್ಲಿರುವ ಬುಲ್ಡೋಜರ್ ಕಾರ್ಯಾಚರಣೆ ಬಗ್ಗೆ ಕೂಡ ತನಿಖೆ ಕೈಗೊಳ್ಳಲು ಅರ್ಜಿಯಲ್ಲಿ ಕೇಳಲಾಗಿತ್ತು.


Last Updated : Apr 26, 2022, 12:37 PM IST

ABOUT THE AUTHOR

...view details