ಕರ್ನಾಟಕ

karnataka

ETV Bharat / bharat

ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ.. ಸಂಧ್ಯಾ ಬಜಾರ್ ಪ್ರದೇಶದಲ್ಲಿ ಪರಿಸ್ಥಿತಿ ಉದ್ವಿಗ್ನ - ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ

ಹೌರಾದ ಸಂಧ್ಯಾ ಬಜಾರ್ ಬಳಿ ಗುರುವಾರ ಸಂಜೆಯ ರಾಮನವಮಿ ಮೆರವಣಿಗೆಯ ಕೆಲ ಕಿಡಿಗೇಡಿಗಳು ದಾಳಿ ನಡೆಸಿದ ಪರಿಣಾಮ ಹಿಂಸಾಚಾರ ಉಂಟಾಗಿದೆ.

Ramnavami procession
ರಾಮನವಮಿ ಮೆರವಣಿಗೆ ವೇಳೆ ಹಿಂಸಾಚಾರ

By

Published : Mar 30, 2023, 11:06 PM IST

ಕೋಲ್ಕತ್ತಾ (ಪಶ್ಚಿಮ ಬಂಗಾಳ): ಕಳೆದ ವರ್ಷ ನಡೆದಿದ್ದ ರಾಮನವಮಿ ಹಿಂಸಾಚಾರದ ಘಟನೆಯಂತೆ ಈ ವರ್ಷವೂ ಪುನರಾವರ್ತನೆಯಾಗಿದೆ. ಗುರುವಾರ ಸಂಜೆ ಹೌರಾದ ಸಂಧ್ಯಾ ಬಜಾರ್ ಬಳಿ ಅಂಜನಿ ಪುತ್ರ ಸೇನೆಯ ರಾಮನವಮಿ ಮೆರವಣಿಗೆಯ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ ಪರಿಣಾಮ ಉದ್ವಿಗ್ನ ವಾತಾವರಣ ಸೃಷ್ಟಿಯಾಗಿದೆ. ಮೆರವಣಿಗೆ ಸಂಧ್ಯಾ ಬಜಾರ್ ತಲುಪಿದಾಗ ಗಾಜಿನ ಬಾಟಲಿಗಳಿಂದ ದಾಳಿ ನಡೆಸಲಾಗಿದೆ ಮೆರವಣಿಗೆಯ ಸಂಘಟನಾಕಾರರು ಆರೋಪಿಸಿದ್ದಾರೆ.

ವಿವಿಧೆಡೆ ಬೆಂಕಿ ಹಚ್ಚಿ ಪ್ರತಿಭಟನೆ:ಮೂಲಗಳ ಪ್ರಕಾರ, ಈ ದುರ್ಘಟನೆಯಲ್ಲಿ, ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ 10ರಿಂದ 15 ಜನರು ಗಾಯಗೊಂಡಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಮತ್ತು ಅಶ್ರುವಾಯು ಸಿಡಿಸುವ ಮೂಲಕ ಬೆನ್ನಟ್ಟಿದ್ದರು ಎಂದು ಮೆರವಣಿಗೆಯ ಸಂಘಟಕರು ಆರೋಪಿಸಿದರು. ಶಾಂತಿಯುತ ಮೆರವಣಿಗೆ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದರು.

ಇದನ್ನೂ ಓದಿ:ದೇವಸ್ಥಾನದಲ್ಲಿ ಬಾವಿಗೆ ಭಕ್ತರು ಬಿದ್ದ ಪ್ರಕರಣ: ಮೃತರ ಸಂಖ್ಯೆ 13ಕ್ಕೆ ಏರಿಕೆ, ನಾಲ್ವರ ನೇತ್ರದಾನಕ್ಕೆ ನಿರ್ಧಾರ

ಕೂಡಲೇ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ: ಆಡಳಿತದ ಅನುಕೂಲಕ್ಕಾಗಿ ಅಂಜನಿ ಪುತ್ರ ಸೇನೆ, ವಿಶ್ವ ಹಿಂದೂ ಪರಿಷತ್ ಮತ್ತು 42 ಸಂಘಟನೆಗಳು ಒಟ್ಟಾಗಿ ಗುರುವಾರ ಈ ಮೆರವಣಿಗೆಯನ್ನು ನಡೆಸಿವೆ. ಶಾಂತಿಯುತ ಮೆರವಣಿಗೆಗೆ ಅನುಮತಿ ನೀಡುವಂತೆ ಪೊಲೀಸ್ ಆಡಳಿತಕ್ಕೆ ಮೊದಲೇ ತಿಳಿಸಲಾಗಿತ್ತು. ಆದರೆ, ಕಳೆದ ವರ್ಷದಂತೆ ಈ ಬಾರಿಯೂ ಸಂಧ್ಯಾ ಬಜಾರ್ ಪ್ರದೇಶಕ್ಕೆ ಮೆರವಣಿಗೆ ಬಂದ ನಂತರವೇ ತೀವ್ರ ದಾಳಿ ನಡೆಸಲಾಗಿದೆ ಎಂದು ಆರೋಪಿಸಿದ್ದಾರೆ.

ಮಮತಾ ಬ್ಯಾನರ್ಜಿ ಹೇಳಿದ್ದೇನು?:ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ''ರಾಮನವಮಿಯನ್ನು ಶಾಂತಿಯುತವಾಗಿ ಆಚರಿಸಲು ಮತ್ತು ಮೆರವಣಿಗೆಗಳನ್ನು ಕೈಗೊಳ್ಳುವಾಗ ಯಾವುದೇ ರೀತಿಯ ಹಿಂಸಾಚಾರದಿಂದ ದೂರವಿರಿ ಎಂದು ರಾಜ್ಯದ ಜನತೆಗೆ ಮನವಿ ಮಾಡಿದ ನಂತರವೂ ಈ ಬೆಳವಣಿಗೆಯಾಗಿದೆ. ಮೆರವಣಿಗೆ ದಯವಿಟ್ಟು ಮಾಡಿ. ಆದರೆ ಶಾಂತಿಯುತವಾಗಿ ಮಾಡಿ. ರಂಜಾನ್ ನಡೆಯುತ್ತಿರುವುದರಿಂದ ದಯವಿಟ್ಟು ಶಾಂತಿಯುತವಾಗಿ ಆಚರಿಸಿ. ಆದರೆ ಹಿಂಸಾಚಾರಕ್ಕೆ ಪ್ರಯತ್ನಿಸಬೇಡಿ. ಪ್ರಚೋದನೆಗೆ ಒಳಗಾಗಬೇಡಿ.'' ಎಂದು ಸಿಎಂ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು.

ಇದನ್ನೂ ಓದಿ:ರಾಮನವಮಿ ಶೋಭಾಯಾತ್ರೆ ಮೇಲೆ ಕಲ್ಲು ತೂರಾಟ.. ವಡೋದರಾದಲ್ಲಿ ಪೊಲೀಸರು ಹೈ ಅಲರ್ಟ್

ABOUT THE AUTHOR

...view details