ಕರ್ನಾಟಕ

karnataka

ETV Bharat / bharat

ಅಧಿಕಾರಿಗಳ ಸಮ್ಮುಖದಲ್ಲೇ ಪಡಿತರ ಲೂಟಿ ಮಾಡಿದ ಗ್ರಾಮಸ್ಥರು! Video

ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರು ಪಡಿತರವನ್ನು ಲೂಟಿ ಮಾಡಿದ ಘಟನೆ ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.

Villagers looted ration, Villagers looted ration in Shivpuri, Villagers looted ration news, Shivpuri news, ಪಡಿತರವನ್ನು ಲೂಟಿ ಮಾಡಿದ ಗ್ರಾಮಸ್ಥರು, ಶಿವಪುರಿಯಲ್ಲಿ ಪಡಿತರವನ್ನು ಲೂಟಿ ಮಾಡಿದ ಗ್ರಾಮಸ್ಥರು, ಪಡಿತರವನ್ನು ಲೂಟಿ ಮಾಡಿದ ಗ್ರಾಮಸ್ಥರು ಸುದ್ದಿ, ಶಿವಪುರಿ ಸುದ್ದಿ,
ಅಧಿಕಾರಿಗಳ ಸಮ್ಮುಖದಲ್ಲೇ ಪಡಿತರ ಲೂಟಿ ಮಾಡಿದ ಗ್ರಾಮಸ್ಥರು

By

Published : Jul 1, 2021, 9:29 AM IST

ಶಿವಪುರಿ(ಮಧ್ಯಪ್ರದೇಶ) : ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರು ಪಡಿತರವನ್ನು ರಾಜಾರೋಷವಾಗಿ ಲೂಟಿ ಮಾಡಿರುವ ಘಟನೆ ಇಲ್ಲಿನ ಬಾರೈ ಗ್ರಾಮದಲ್ಲಿ ಕಂಡು ಬಂತು. ಬಾರೈ ಗ್ರಾಮದ ನ್ಯಾಯಯುತ ಬೆಲೆ ಅಂಗಡಿಯಲ್ಲಿ ಪಡಿತರವನ್ನು ಇಲ್ಲಿನ ಗ್ರಾಮಸ್ಥರು ಲೂಟಿ ಮಾಡಿದ್ದಾರೆ.

ಅಧಿಕಾರಿಗಳ ಸಮ್ಮುಖದಲ್ಲೇ ಪಡಿತರ ಲೂಟಿ ಮಾಡಿದ ಗ್ರಾಮಸ್ಥರು

ನಡೆದಿದ್ದೇನು?:ಬಾರೈ ಗ್ರಾಮಸ್ಥರು ಪಡಿತರ ವಿತರಿಸದಿರುವ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರನ್ನು ಆಲಿಸಿದ ಅಧಿಕಾರಿಗಳು ಗ್ರಾಮಕ್ಕೆ ಬಂದು ಪಡಿತರವನ್ನು ವಿತರಿಸಲಾಗುತ್ತಿದೆ ಎಂದು ಗ್ರಾಮದ ಕಾವಲುಗಾರರಿಂದ ಜನರಿಗೆ ತಿಳಿಸಲಾಯಿತು.

ಪಡಿತರ ತೆಗೆದುಕೊಳ್ಳಲು ಜನರು ನ್ಯಾಯಬೆಲೆ ಅಂಗಡಿಗೆ ತಲುಪಿದರು. ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರವನ್ನು ನೀಡಲಾಗುತ್ತಿತ್ತು. ಈ ವೇಳೆ ಜನ ಸಮೂಹ ಹೆಚ್ಚಾಗಿ ನೇರ ನ್ಯಾಯಬೆಲೆ ಅಂಗಡಿಗೆ ನುಗ್ಗಿ ಪಡಿತರವನ್ನು ಲೂಟಿ ಮಾಡಿದ್ದಾರೆ.

ಗ್ರಾಮಸ್ಥರಿಗಾಗಿ ನ್ಯಾಯಬೆಲೆ ಅಂಗಡಿಯಲ್ಲಿ ಇಟ್ಟುಕೊಂಡಿದ್ದ ಸುಮಾರು 70 ಕ್ವಿಂಟಾಲ್ ಗೋಧಿ ಮತ್ತು 17 ಕ್ವಿಂಟಾಲ್ ಅಕ್ಕಿಯನ್ನು ದೋಚಿದ್ದಾರೆ. ಪಡಿತರ ವಿತರಿಸುವಾಗ ಪೊಲೀಸರಿಗೆ ಮನವಿ ಸಲ್ಲಿಸಿದ್ದೇವೆ. ಆದ್ರೆ ಪೊಲೀಸರು ಉಪಸ್ಥಿತಿಯಿಲ್ಲದ ಕಾರಣ ಈ ಘಟನೆ ನಡೆದಿದೆ ಎಂದು ಆಹಾರ ಅಧಿಕಾರಿ ನರೇಶ್​ ಮಾಝಿ ಹೇಳಿದ್ದಾರೆ.

ಓದಿ:Bigg Boss: ನಿನ್ನ ಫ್ಯಾನ್ಸ್ Vote ಮಾಡುವುದಿಲ್ಲ, ನಾನು ಹೊರಗೆ ಹೋಗುತ್ತೇನೆ ಎಂದ ದಿವ್ಯಾ ಸುರೇಶ್

ABOUT THE AUTHOR

...view details