ಗೋಪಾಲಗಂಜ್(ಬಿಹಾರ) :ಬಿಹಾರದಲ್ಲಿ ಮದ್ಯ ಮಾರಾಟ ನಿಷೇಧವಿದೆ. ಆಗಾಗ ಮದ್ಯದ ದರೋಡೆ ಪ್ರಕರಣಗಳು ವರದಿಯಾಗುತ್ತಿರುತ್ತವೆ. ಇದರ ನಡುವೆ ಗೋಪಾಲ್‌ಗಂಜ್‌ನಲ್ಲಿ ಇಂತಹದ್ದೇ ಘಟನೆಯೊಂದು ಬೆಳಕಿಗೆ ಬಂದಿದೆ. ಅಕ್ರಮವಾಗಿ ಮದ್ಯ ಸಾಗಣೆ ಮಾಡುತ್ತಿದ್ದ ಕಾರಿನಲ್ಲಿದ್ದ ಲಿಕ್ಕರ್ ಬಾಟಲ್ಗಳನ್ನು ಗ್ರಾಮಸ್ಥರು ಲೂಟಿ ಮಾಡಿದ್ದಾರೆ.
ಗೋಪಾಲಗಂಜ್ನಲ್ಲಿ ವ್ಯಕ್ತಿಯೊಬ್ಬ ಕಾರಿನಲ್ಲಿ ಮದ್ಯದ ಬಾಟಲಿಗಳನ್ನು ಕಳ್ಳ ಸಾಗಣೆ ಮಾಡುತ್ತಿದ್ದ. ಈ ವೇಳೆ, ಕಾರು ಏಕಾಏಕಿ ಇಲ್ಲಿನ ಬದ್ರಜಿಮಿ ಮಾರುಕಟ್ಟೆಯೊಳಗೆ ನುಗ್ಗಿ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕೋಪಗೊಂಡ ಗ್ರಾಮಸ್ಥರು, ಕಾರನ್ನು ಧ್ವಂಸ ಮಾಡಲು ಮುಂದಾಗಿದ್ದರು. ಆಗ ಕಾರಿನಲ್ಲಿ ಮದ್ಯದ ಬಾಟಲ್ಗಳು ಪತ್ತೆಯಾಗಿವೆ. ಘಟನೆ ಬಳಿಕ ಚಾಲಕ ಪರಾರಿಯಾಗಿದ್ದ ಎಂದು ತಿಳಿದು ಬಂದಿದೆ.