ಅರಾರಿಯಾ (ಬಿಹಾರ ):ಪೂರ್ನಿಯಾದ ಕಸ್ಬಾ ಪೊಲೀಸ್ ಠಾಣಾ ವ್ಯಾಪ್ತಿಯ ಗರ್ವಾಲಿ ಬಳಿ ಮೀನಿನ ವಾಹನ ಪಲ್ಟಿಯಾಗಿದೆ. ಈ ವೇಳೆ ಸ್ಥಳೀಯರು ದೌಡಾಯಿಸಿ ಬುಟ್ಟಿಗಳಲ್ಲಿ ಎಲ್ಲಾ ಮೀನುಗಳನ್ನು ತುಂಬಿಕೊಂಡು ಹೋಗಿದ್ದಾರೆ.
ಪುರ್ನಿಯಾ ಮಂಡಿಗೆ ಮೀನುಗಳನ್ನು ವಾಹನದ ಮೂಲಕ ತರಲಾಗುತ್ತಿತ್ತು. ಸ್ಥಳೀಯ ಪೊಲೀಸರು ಸ್ಥಳಕ್ಕೆ ತಲುಪುವ ವೇಳೆಗೆ ಮೀನುಗಳೆಲ್ಲಾ ಸ್ಥಳೀಯರ ಮನೆ ಸೇರಿದ್ದವು. ಜನರು ಸುಮಾರು 4 ಕ್ವಿಂಟಾಲ್ ಮೀನನ್ನು ಲೂಟಿ ಮಾಡಿದ್ದಾರೆ ಎನ್ನಲಾಗ್ತಿದೆ.
ನಾಲ್ಕು ಕ್ವಿಂಟಾಲ್ ಲೂಟಿ ಮಾಡಿದ ಸ್ಥಳೀಯರು ಅರಾರಿಯಾದಿಂದ ಮೀನುಗಳನ್ನು ತುಂಬಿಕೊಂಡು ಪೂರ್ನಿಯಾಗೆ ಬರುತ್ತಿರುವುದಾಗಿ ಚಾಲಕ ತಿಳಿಸಿದ್ದಾನೆ. ನಂತರ ನಿದ್ರೆ ಸಮಸ್ಯೆಯಿಂದ ಪಿಕಪ್ ವಾಹನವು ಡಿವೈಡರ್‌ಗೆ ಡಿಕ್ಕಿ ಹೊಡೆದು ಎನ್‌ಎಚ್ 57 ರಲ್ಲೇ ಪಲ್ಟಿಯಾಗಿದೆ. ಅವರ ವಾಹನದಲ್ಲಿ ಸುಮಾರು 6 ಕ್ವಿಂಟಾಲ್ ಮೀನುಗಳಿದ್ದವು ಎನ್ನಲಾಗ್ತಿದೆ. ಇದರಲ್ಲಿ ಕೇವಲ 2 ಕ್ವಿಂಟಾಲ್ ಮೀನು ಮಾತ್ರ ಉಳಿದುಕೊಂಡಿದೆ. ಜನರು 4 ಕ್ವಿಂಟಾಲ್ ಮೀನು ದೋಚಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಬೆಟ್ಟಗಳಲ್ಲಿ ಅಶಾಂತಿ ಉಂಟುಮಾಡಲು ಅವಕಾಶ ನೀಡುವುದಿಲ್ಲ: ಬಿಜೆಪಿಗೆ ಮಮತಾ ಎಚ್ಚರಿಕೆ