ರಘುನಾಥಗಂಜ್(ಪಶ್ಚಿಮಬಂಗಾಳ):ವಾಮಾಚಾರ ಮಾಡಿದ ಶಂಕೆಯ ಮೇಲೆ ಗ್ರಾಮಸ್ಥರೆಲ್ಲರೂ ಸೇರಿ ಕುಟುಂಬವೊಂದರ ಮೇಲೆ ದೌರ್ಜನ್ಯ ನಡೆಸಿದ್ದಲ್ಲದೇ, ಮೂತ್ರ ಕುಡಿಸಿದ ಅಮಾನವೀಯ ಘಟನೆ ಪಶ್ಚಿಮ ಬಂಗಾಳದಲ್ಲಿ ಬೆಳಕಿಗೆ ಬಂದಿದೆ.
ಮುರ್ಷಿದಾಬಾದ್‌ನ ರಘುನಾಥಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಮಥುರಾಪುರ ಆದಿವಾಸಿಪಾರಾ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಕುಟುಂಬಕ್ಕೆ ಮೂತ್ರ ಕುಡಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ರಘುನಾಥಗಂಜ್ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಆರೋಪವೇನು?:ಮಥುರಾಪುರ ಆದಿವಾಸಿಪಾರಾದಲ್ಲಿ ಕುಟುಂಬವೊಂದು ವಾಮಾಚಾರ ನಡೆಸಿದ ಆರೋಪ ಹೊತ್ತಿದೆ. ಇದರಿಂದ ನೆರೆಮನೆಯ ವ್ಯಕ್ತಿಯೊಬ್ಬ ಅಕಾಲಿಕವಾಗಿ ಮರಣ ಹೊಂದಿದ್ದಾನೆ. ಇದು ಆ ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ಕೆರಳಿಸಿದೆ. ಇದರಿಂದ ಊರ ಜನರು ಒಟ್ಟಾಗಿ ಆರೋಪಿ ಕುಟುಂಬದ ಎಲ್ಲ ಸದಸ್ಯರನ್ನು ರಸ್ತೆಗೆ ಎಳೆ ತಂದು ಕೂರಿಸಿದ್ದಾರೆ.