ನಿಜಾಮಾಬಾದ್ (ತೆಲಂಗಾಣ) : ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕನ ಸಾವಿನ ತನಿಖೆ ನಡೆಸಲು ತೆರಳಿದ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವ ಘಟನೆ ನಡೆದಿದೆ.
ತೆಲಂಗಾಣದ ನಿಜಾಮಾಬಾದ್ನ ಹಸಕೋತ್ತುರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಿದ್ಧಾರ್ಥ್ ಎಂಬ ಯುವಕ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದನು. ಈತನ ಸಾವಿಗೆ ಗ್ರಾಮದ ಯುವಕ ರಾಜೇಶ್ ಕಾರಣ ಎಂದು ಸಂತ್ರಸ್ತೆಯ ಕುಟುಂಬ ಆರೋಪಿಸಿತ್ತು. ಈ ವೇಳೆ ತನಿಖೆ ನಡೆಸಲು ಪೊಲೀಸರು ತೆರಳಿದ್ದು, ಸಂತ್ರಸ್ತ ಕುಟುಂಬ ಅವರನ್ನ ತಡೆದಿದೆ. ಈ ವೇಳೆ ಪೊಲೀಸ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ.