ಗುಜರಾತ್: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಊಟಕ್ಕೆ ಆಮಂತ್ರಿಸಿದ್ದ ಅಮ್ದವಾಡ ನಿವಾಸಿ ಆಟೋ ಚಾಲಕ ವಿಕ್ರಮ್ ದತ್ತಾನಿ ಅವರು ಬಿಜೆಪಿ ಸೇರ್ಪಡೆ ಆಗಿದ್ದಾರೆ.
ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಅವರು ಕೆಲವು ವಾರಗಳ ಹಿಂದೆ ಗುಜರಾತ್‌ಗೆ ಭೇಟಿ ನೀಡಿದ್ದರು. ಈ ವೇಳೆ ಇಲ್ಲಿನ ಅಮ್ದವಾಡ ನಿವಾಸಿ ಆಟೋ ಚಾಲಕ ವಿಕ್ರಮ್ ದತ್ತಾನಿ ಅವರು ಕೇಜ್ರಿವಾಲ್ ಅವರನ್ನು ತಮ್ಮ ಮನೆಗೆ ಊಟಕ್ಕೆ ಆಮಂತ್ರಿಸಿದ್ದರು. ಅದರಂತೆ ಮುಖ್ಯಮಂತ್ರಿ ಅವರು ಊಟಕ್ಕೂ ತೆರಳಿದ್ದರು. ಇದಾದ 17 ದಿನಗಳ ನಂತರ ವಿಕ್ರಮ್ ದತ್ತಾನಿ ಅವರು ಬಿಜೆಪಿಯ ಕೇಸರಿ ಉಡುಪನ್ನು ಧರಿಸಿದ್ದಾರೆ.