ಬಲ್ಲಿಯಾ(ಉತ್ತರಪ್ರದೇಶ):ಉತ್ತರಪ್ರದೇಶದ ವಿಧಾನಸಭೆ ಚುನಾವಣೆಯ 4ನೇ ಹಂತದ ಮತದಾನಕ್ಕೆ ಸಿದ್ಧತೆ ನಡೆದ ಮಧ್ಯೆಯೇ ವಿಕಾಸಶೀಲ ಇನ್ಸಾನ್ ಪಕ್ಷ(ವಿಐಪಿ)ದ ರಾಷ್ಟ್ರೀಯ ಅಧ್ಯಕ್ಷ ಮುಖೇಶ್ ಸಾಹ್ನಿ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆದರಿಕೆ ಹಾಕಿದ ಘಟನೆ ನಡೆದಿದೆ.
ಬಲ್ಲಿಯಾದ ಕಾಲೇಜೊಂದರಲ್ಲಿ ಪ್ರಚಾರ ರ್ಯಾಲಿನಡೆಸುತ್ತಿದ್ದ ವೇಳೆ ವಿಐಪಿ ಪಕ್ಷದ ಅಧ್ಯಕ್ಷ ಮುಖೇಶ್ ಸಾಹ್ನಿ ಮಾತನಾಡುತ್ತಾ, ಕೇಂದ್ರ ಹಾಗೂ ಉತ್ತರಪ್ರದೇಶ ಬಿಜೆಪಿ ನೇತೃತ್ವದ ಸರ್ಕಾರ ನಿಶಾದ್ ಸಮುದಾಯಕ್ಕೆ ಮೀಸಲಾತಿ ನೀಡದಿದ್ದರೆ ಸರ್ಕಾರವನ್ನು ಉರುಳಿಸಲಾಗುವುದು ಎಂದು ಬೆದರಿಕೆ ಮಾತನ್ನಾಡಿದ್ದಾರೆ.
ಅಲ್ಲದೇ, ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ನಾವು ಬೆಂಬಲಿಸಲಿದ್ದೇವೆ. ನಿಶಾದ್ ಸಮಾಜಕ್ಕೆ ಮೀಸಲಾತಿ ಕೊಡಿಸುವ ಸಲುವಾಗಿ ನಮ್ಮ ಹೋರಾಟ ಮುಂದುವರಿಯಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಸಿಎಂ ಯೋಗಿ ಆದಿತ್ಯನಾಥ್ ಚುನಾವಣೆ ವೇಳೆ, ಮೀಸಲಾತಿ ಬಗ್ಗೆ ಮಾತನಾಡಿ ಬಳಿಕ ಮರೆತು ಬಿಡುತ್ತಾರೆ. ಇದು ಮುಂದೆ ಸರ್ಕಾರ ರಚನೆಗೆ ಮುಳುವಾಗಲಿದೆ ಎಂದು ಟೀಕಿಸಿದ್ದಾರೆ.
ಅಲ್ಲದೇ ಚುನಾವಣಾ ಆಯೋಗದ ವಿರುದ್ಧವೂ ವಾಗ್ದಾಳಿ ನಡೆಸಿರುವ ಸಾಹ್ನಿ, ವಿಕಾಸ್ಶೀಲ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸಲು ಸಲ್ಲಿಸಿದ್ದ ಅರ್ಧದಷ್ಟು ಅಭ್ಯರ್ಥಿಗಳ ನಾಮಪತ್ರಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ ಎಂದಿದ್ದಾರೆ.
ಓದಿ:ನಿರ್ಬಂಧಗಳಿಂದ ಕೆರಳಿದ ರಷ್ಯಾ.. ಅಮೆರಿಕಕ್ಕೆ ಬಾಹ್ಯಾಕಾಶ ಕೇಂದ್ರದ ಬೆದರಿಕೆ