ಕರ್ನಾಟಕ

karnataka

ETV Bharat / bharat

ಲಂಡನ್ ಹೈಕೋರ್ಟ್​ನಲ್ಲಿ ಮಲ್ಯಗೆ ಭಾರಿ ಹಿನ್ನಡೆ: ಸಾಲ ವಸೂಲಾತಿ ಸನಿಹದಲ್ಲಿ ಬ್ಯಾಂಕ್​ಗಳು - ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟ

ಭಾರತದಲ್ಲಿ ಮಲ್ಯ ಹೊಂದಿರುವ ಆಸ್ತಿಗಳ ಮೇಲಿನ ಭದ್ರತೆಯನ್ನು ರದ್ದುಪಡಿಸಿ ಸಾಲ ವಸೂಲಾತಿಗೆ ಸಹಕರಿಸಬೇಕು ಎಂದು ಬ್ಯಾಂಕ್‌ಗಳು ಹೈಕೋರ್ಟ್‌ಗೆ ಮೊರೆಹೋಗಿದ್ದವು.

Vijay Mallya loses bankruptcy petition amendment High Court battle in UK
ಲಂಡನ್ ಹೈಕೋರ್ಟ್​ನಲ್ಲಿ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯಗೆ ಹಿನ್ನಡೆ

By

Published : May 19, 2021, 2:50 AM IST

Updated : May 19, 2021, 5:30 AM IST

ಲಂಡನ್: ತನ್ನ ಕಂಪನಿಗಳು ದಿವಾಳಿಯಾಗಿವೆ ಎಂದು ತಿದ್ದುಪಡಿ ಮಾಡಬೇಕೆಂದು ದೇಶ ಭ್ರಷ್ಟ ಉದ್ಯಮಿ ವಿಜಯ್ ಮಲ್ಯ ಲಂಡನ್ ಹೈಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿದ ಅಲ್ಲಿನ ಹೈಕೋರ್ಟ್​ ಭಾರತೀಯ ಬ್ಯಾಂಕುಗಳ ಒಕ್ಕೂಟದ ಪರವಾಗಿ ತೀರ್ಪು ನೀಡಿದೆ.

ಈ ಮೂಲಕ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ವಿಜಯ್ ಮಲ್ಯ ಅವರ ಈಗ ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ಏರ್‌ಲೈನ್ಸ್‌ ಸಾಲವನ್ನು ವಸೂಲಿ ಮಾಡುವ ವಿಚಾರದಲ್ಲಿ ಮುನ್ನಡೆ ಸಾಧಿಸಿದೆ.

ಮಲ್ಯ ಭಾರತದಲ್ಲಿ ಸಾಲಗಾರರಾಗಿರುವುದರಿಂದ, ಭಾರತದಲ್ಲಿ ಅವರು ಹೊಂದಿರುವ ಆಸ್ತಿಗಳ ಮೇಲಿನ ಭದ್ರತೆಯನ್ನು ರದ್ದುಪಡಿಸಿ ಸಾಲ ವಸೂಲಾತಿಗೆ ಸಹಕರಿಸಬೇಕು ಎಂದು ಬ್ಯಾಂಕ್‌ಗಳು ಹೈಕೋರ್ಟ್‌ಗೆ ಮೊರೆಹೋಗಿದ್ದವು.

ಇದನ್ನೂ ಓದಿ:2020-21ರ ಆರ್ಥಿಕ ವರ್ಷದಲ್ಲಿ ಕೆನರಾ ಬ್ಯಾಂಕ್ ಲಾಭದಲ್ಲಿ ಭಾರಿ ಇಳಿಕೆ

ಹೈಕೋರ್ಟ್​ ವಿಚಾರವನ್ನು ಪುರಸ್ಕರಿಸಿದ ಲಂಡನ್​ ಹೈಕೋರ್ಟ್​ನ ನ್ಯಾಯಾಧೀಶ ಮೈಕೆಲ್ ಬ್ರಿಗ್ಸ್ ಅವರು ಬ್ಯಾಂಕುಗಳ ಪರವಾಗಿ ತಮ್ಮ ತೀರ್ಪನ್ನು ನೀಡಿದ್ದಾರೆ. ಭದ್ರತಾ ಹಕ್ಕುಗಳನ್ನು ಮನ್ನಾ ಮಾಡುವುದನ್ನು ತಡೆಯುವ ಯಾವುದೇ ಸಾರ್ವಜನಿಕ ನೀತಿ ನಮ್ಮಲ್ಲಿಲ್ಲ ಎಂದು ಘೋಷಿಸಲು ಮಲ್ಯ ಅವರ ವಕೀಲರು ವಾದಮಂಡನೆ ಮಾಡಿದ್ದರು.

ವಿಡಿಯೋ ಕಾನ್ಫರೆನ್ಸ್​ ಮೂಲಕ ವಿಚಾರಣೆ ನಡೆದಿದ್ದು, ವಿಜಯ್ ಮಲ್ಯ ಮತ್ತು ಭಾರತೀಯ ಬ್ಯಾಂಕುಗಳ ಒಕ್ಕೂಟದ ನಡುವಿನ ಅಂತಿಮ ವಾದ ಮಂಡನೆಗೆ ಜುಲೈ 26ರಂದು ದಿನಾಂಕ ನಿಗದಿ ಮಾಡಲಾಗಿದೆ.

Last Updated : May 19, 2021, 5:30 AM IST

ABOUT THE AUTHOR

...view details