ಕರ್ನಾಟಕ

karnataka

ಲಂಡನ್​​​ನಲ್ಲಿರುವ ಮನೆಯನ್ನೂ ಕಳೆದುಕೊಂಡ ವಿಜಯಮಲ್ಯ! ಯಾಕೆ ಗೊತ್ತಾ?

By

Published : Jan 19, 2022, 6:31 AM IST

ಸ್ವಿಸ್​ನ ಯುಬಿಎಸ್ ಬ್ಯಾಂಕ್​ನೊಂದಿಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ, ಐಷಾರಾಮಿ ಮನೆಯನ್ನು ಖಾಲಿ ಮಾಡಲು ಲಂಡನ್ ಹೈಕೋರ್ಟ್ ಉದ್ಯಮಿ ವಿಜಯ್ ಮಲ್ಯಗೆ ಸೂಚನೆ ನೀಡಿದೆ.

Vijay Mallya faces eviction from luxury home in London
ಲಂಡನ್​ನ ಐಷಾರಾಮಿ ಮನೆ ಖಾಲಿ ಮಾಡಲು ವಿಜಯ್​ ಮಲ್ಯಗೆ ಬ್ರಿಟನ್ ಕೋರ್ಟ್ ಸೂಚನೆ

ಲಂಡನ್(ಇಂಗ್ಲೆಂಡ್​): ಸ್ವಿಸ್ ಬ್ಯಾಂಕ್​ನೊಂದಿಗೆ ವಿವಾದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ದೇಶ ಭ್ರಷ್ಟ ಉದ್ಯಮಿ ವಿಜಯ್ ಮಲ್ಯಗೆ ತೀವ್ರ ಹಿನ್ನಡೆಯಾಗಿದ್ದು, ಲಂಡನ್​​ನಲ್ಲಿರುವ ಐಷಾರಾಮಿ ನಿವಾಸವನ್ನು ತೊರೆಯುವಂತೆ ವಿಜಯ್ ಮಲ್ಯಗೆ ಆದೇಶ ನೀಡಲಾಗಿದೆ.

ಸ್ವಿಸ್​ ಬ್ಯಾಂಕ್​ನೊಂದಿಗೆ ವಿಜಯ್ ಮಲ್ಯ ಸಾಲವನ್ನು ಪಡೆದಿದ್ದು, ತಮ್ಮ ಮನೆ ಸೇರಿದಂತೆ ಇತರ ಆಸ್ತಿಯನ್ನು ಅಡಮಾನವಾಗಿ ಇರಿಸಿದ್ದರು. ಹಲವಾರು ಬಾರಿ ಸಾಲ ಮರುಪಾವತಿಗೆ ಸೂಚನೆ ನೀಡಲಾಗಿತ್ತು. ದಿನಾಂಕವನ್ನೂ ವಿಸ್ತರಣೆ ಮಾಡಲಾಗಿತ್ತು.

ಸಾಲ ಮರುಪಾವತಿ ಮಾಡಲಾಗದ ಹಿನ್ನೆಲೆಯಲ್ಲಿ ಮಲ್ಯ ಕುಟುಂಬದವರಿಗೆ ಇನ್ನೂ ಹೆಚ್ಚಿನ ಕಾಲಾವಕಾಶ ನೀಡಲು ಸಾಧ್ಯವಿಲ್ಲ. ಅವರು ತಕ್ಷಣ ತಮ್ಮ ಐಷಾರಾಮಿ ನಿವಾಸವನ್ನು ಖಾಲಿ ಮಾಡಬೇಕೆಂದು ಕೋರ್ಟ್​ ಆದೇಶ ನೀಡಿದೆ.

ವಿಜಯ್ ಮಲ್ಯ ನಿವಾಸ ಲಂಡನ್​ನ ಕಾರ್ನ್​​ವಾಲ್ ಟೆರೇಸ್​ ಬಳಿ ಇದ್ದು, ರೆಜೆಂಟ್ ಪಾರ್ಕ್​ಗೆ ಸಮೀಪದಲ್ಲಿದೆ. ಅದಷ್ಟೇ ಅಲ್ಲದೇ ವಿಶ್ವವಿಖ್ಯಾತ ಮೇಡಂ ಟುಸ್ಸಾಡ್ಸ್​​ ಮ್ಯೂಸಿಯಂ ಕೂಡಾ ವಿಜಯ್ ಮಲ್ಯ ನಿವಾಸಕ್ಕೆ ಹತ್ತಿರವಿದೆ.

ಪ್ರಸ್ತುತ ಈ ಐಷಾರಾಮಿ ಮನೆಯಲ್ಲಿ ಮಗ ಸಿದ್ಧಾರ್ಥ್ ಮತ್ತು 95 ವರ್ಷದ ತಾಯಿ ಲಲಿತಾ ವಾಸವಾಗಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ರಾಜ್ಯದಲ್ಲಿ ಟೆಸ್ಲಾ ಘಟಕ ಆರಂಭಿಸುವಂತೆ ಜಗತ್ತಿನ ನಂ.1 ಶ್ರೀಮಂತ ಉದ್ಯಮಿಗೆ ಆಹ್ವಾನ ; ಸಚಿವ ನಿರಾಣಿ ಟ್ವೀಟ್‌

ABOUT THE AUTHOR

...view details