ಕರ್ನಾಟಕ

karnataka

ವಿಜಯ್​ ದಿವಸ್​: ಬಾಂಗ್ಲಾ ಯುದ್ಧದಲ್ಲಿ ಮಡಿದ ವೀರಯೋಧರ ಸ್ಮರಣೆ

By

Published : Dec 16, 2022, 5:47 PM IST

Updated : Dec 16, 2022, 6:25 PM IST

1971 ರಲ್ಲಿ ಬಾಂಗ್ಲಾ ವಿಮೋಚನೆಗಾಗಿ ನಡೆದ ಯುದ್ಧದಲ್ಲಿ ಪಾಕಿಸ್ತಾನವನ್ನು ಭಾರತೀಯ ಸೇನೆ ಮಣಿಸಿತ್ತು. ಈ ವಿಜಯದ ನೆನಪಿಗಾಗಿ ದೇಶದಲ್ಲಿ ವಿಜಯ್‌ ದಿವಸ್ ಆಚರಿಸಲಾಗುತ್ತದೆ.

vijay-diwas-celebrations-brave-women-gallantry-awardees-felicitated-by-western-commander
ವಿಜಯ್​ ದಿವಾಸ್​ ಆಚರಣೆ: ವೀರ ವನಿತೆಯರು, ಶೌರ್ಯಪ್ರಶಸ್ತಿ ಪುರಸ್ಕೃತರಿಗೆ ವೆಸ್ಟರ್ನ್​ ಕಮಾಂಡರ್​ರಿಂದ ಸನ್ಮಾನ

ಜಮ್ಮು: ಇಂದು ಭಾರತೀಯ ಸೇನೆಗೆ ವಿಶೇಷ ದಿನ. 1971ರಲ್ಲಿ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಭಾರತೀಯ ಸೇನೆ ಐತಿಹಾಸಿಕ ವಿಜಯ ಸಾಧಿಸಿತ್ತು. ಡಿಸೆಂಬರ್ 3ರಿಂದ 13 ದಿನಗಳ ಕಾಲ ನಡೆದ ಸಮರ ಅಧಿಕೃತವಾಗಿ ಡಿ. 16ಕ್ಕೆ ಅಂತ್ಯಗೊಂಡು ಬಾಂಗ್ಲಾದೇಶ ಸ್ವಾತಂತ್ರ್ಯ ರಾಷ್ಟ್ರವಾಯಿತು. ಈ ವಿಜಯದ ಸಂಕೇತವಾಗಿ ಮತ್ತು ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುವ ಹಿನ್ನೆಲೆಯಲ್ಲಿ ಭಾರತದಲ್ಲಿ ವಿಜಯ್​ ದಿವಸ್​ ಆಚರಿಸಲಾಗುತ್ತದೆ. ಅಂದರಂತೆ ಇಂದು ಭಾರತೀಯ ಸೇನೆ, ವೆಸ್ಟರ್ನ್ ಕಮಾಂಡ್ ಬಲಿದಾನ್ ಸ್ತಂಭ್‌ನಲ್ಲಿ ವಿಜಯ್ ದಿವಸ್ ಆಚರಣೆ ನಡೆಯಿತು. ಜಮ್ಮುವಿನ ಸುಂಜುವಾನ್‌ನ ಜೋರಾವರ್ ಕ್ರೀಡಾಂಗಣದಲ್ಲಿ ಮೆಗಾ ಎಕ್ಸ್-ಸರ್ವಿಸ್‌ಮೆನ್ ರ್ಯಾಲಿ ನಡೆಯಿತು.

Last Updated : Dec 16, 2022, 6:25 PM IST

ABOUT THE AUTHOR

...view details