ಪಾಟ್ನಾ: ಬಿಹಾರದಲ್ಲಿ ಮಹಿಳಾ ಐಎಎಸ್ ಅಧಿಕಾರಿಯೊಬ್ಬರು ನೀಡಿದ ಹೇಳಿಕೆ ವಿವಾದಕ್ಕೆ ಈಡಾಗಿದೆ. ಮಹಿಳಾ ಅಧಿಕಾರಿ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ.
ಸರ್ಕಾರವು 20-30 ರೂಪಾಯಿಗೆ ಸ್ಯಾನಿಟರಿ ಪ್ಯಾಡ್‌ಗಳನ್ನು ನೀಡಬಹುದಲ್ಲವೇ ಎಂದು ವಿದ್ಯಾರ್ಥಿಯೊಬ್ಬರು ಬಿಹಾರ ಸರ್ಕಾರದ ಮಹಿಳಾ ಐಎಎಸ್ ಅಧಿಕಾರಿಯೊಬ್ಬರಿಗೆ ಕೇಳಿದ್ದಾರೆ. ಈ ವೇಳೆ ಐಎಎಸ್ ಅಧಿಕಾರಿ ನೀಡಿದ ಉತ್ತರದಿಂದ ಎಲ್ಲರೂ ದಂಗಾಗಿದ್ದಾರೆ. ನಾಳೆ ಸರ್ಕಾರ ನಿಮಗೆ ಕುಟುಂಬ ಯೋಜನೆ ವಿಧಾನಗಳು ಮತ್ತು ಕಾಂಡೋಮ್‌ಗಳನ್ನು ನೀಡುತ್ತದೆ ಎಂದು ನಿರೀಕ್ಷಿಸುತ್ತೀರಾ ಎಂದು ಮರು ಪ್ರಶ್ನೆ ಹಾಕಿದ್ದಾರೆ ಅಧಿಕಾರಿ. ಐಎಎಸ್ ಅಧಿಕಾರಿ ಅವರ ಈ ಮಾತೇ ಈಗ ವಿವಾದಕ್ಕೆ ಈಡಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
ಮಹಿಳಾ ಐಎಎಸ್ ಅಧಿಕಾರಿ ಮಾತನಾಡಿದ್ದೇನು?ಈ ಬೇಡಿಕೆಗಳಿಗೆ ಯಾವುದೇ ಮಿತಿ ಇದೆಯೇ, 20-30 ರೂಗೆ ಸ್ಯಾನಿಟಿರಿ ಪ್ಯಾಡ್‌ಗಳನ್ನು ನೀಡಬಹುದಾ? ನಾಳೆ ನೀವು ಜೀನ್ಸ್ ಮತ್ತು ನಂತರ ಸುಂದರವಾದ ಬೂಟುಗಳನ್ನು ಕೇಳುತ್ತೀರಿ. ಇನ್ನು ಕುಟುಂಬ ಯೋಜನೆಗೆ ಬಂದಾಗ ಕಾಂಡೋಮ್‌ಗಳನ್ನು ಸಹ ಉಚಿತವಾಗಿ ನೀಡಬೇಕಾಗುತ್ತದೆ ಎಂದಿದ್ದಾರೆ.