ಚಿರತೆಗಳು ಅತ್ಯುತ್ತಮ ಪರ್ವತಾರೋಹಿಗಳು. ಅವುಗಳು ಎಷ್ಟು ಚುರುಕುಬುದ್ಧಿ ಮತ್ತು ಬಲಶಾಲಿಗಳೆಂದರೆ ಕೆಲವೇ ಸೆಕೆಂಡುಗಳಲ್ಲಿ ಮರಗಳನ್ನು ಹತ್ತಿ ಬೇಟೆಯಾಡಬಲ್ಲವು. ಈ ಚಿರತೆಗಳು ಕೋತಿಗಳು ಮತ್ತು ಗೂಬೆಗಳಂತೆ ಬೇಟೆಗಾಗಿ ಮರ ಹತ್ತುತ್ತವೆ. ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬುವರು ಲೇಟೆಸ್ಟ್ ವಿಡಿಯೋ ಹಂಚಿಕೊಂಡಿದ್ದು ಇಂಟರೆಸ್ಟಿಂಗ್ ಆಗಿದೆ. ಇಲ್ಲಿ ಸುಮಾರು 70-80 ಅಡಿಗಳ ಎತ್ತರದಲ್ಲಿರುವ ಮರದ ತುದಿಯಲ್ಲಿ ಚಿರತೆ ಬೀಡು ಬಿಟ್ಟಿದೆ.
ಈ ಮರದಲ್ಲಿ ಚಿರತೆ ಮಲಗಿದೆ! ಎಲ್ಲಿದೆ ಎಂದು ನೀವು ಗುರುತಿಸುವಿರಾ?- ವಿಡಿಯೋ - ಮರದ ತುದಿಯಲ್ಲಿ ಚಿರತೆ
ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ಎಂಬವರು ಮರದ ತುದಿಯಲ್ಲಿ ಚಿರತೆಯೊಂದು ಮಲಗಿರುವ ವಿಡಿಯೋ ಹಂಚಿಕೊಂಡಿದ್ದಾರೆ.
![ಈ ಮರದಲ್ಲಿ ಚಿರತೆ ಮಲಗಿದೆ! ಎಲ್ಲಿದೆ ಎಂದು ನೀವು ಗುರುತಿಸುವಿರಾ?- ವಿಡಿಯೋ Leopard climbing on Tree top Video viral of Leopard climbing on Tree Leopard video twitted by IFS Praveen Kaswan ಮರದಲ್ಲಿ ಚಿರತೆ ಐಎಫ್ಎಸ್ ಅಧಿಕಾರಿ ಪ್ರವೀಣ್ ಕಾಸ್ವಾನ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪ್ರವೀಣ್ ಕಾಸ್ವಾನ್ ಮರದಲ್ಲಿ ಚಿರತೆ ಆಯಾಗಿ ನಿದ್ದೆ ಮರದ ತುದಿಯಲ್ಲಿ ಚಿರತೆ ಮರದ ತುದಿಯಲ್ಲಿ ಚಿರತೆ ವನ್ಯಜೀವಿ ನಿರ್ವಹಣೆಯು ದೈನಂದಿನ ಸಾಹಸದ ಕ್ಷೇತ್ರ](https://etvbharatimages.akamaized.net/etvbharat/prod-images/768-512-16410532-459-16410532-1663561224679.jpg)
ಮರದಲ್ಲಿ ಚಿರತೆಯೊಂದು ಮಲಗಿದೆ
ವನ್ಯಜೀವಿ ನಿರ್ವಹಣೆ ದೈನಂದಿನ ಸಾಹಸದ ಕ್ಷೇತ್ರ. ಈ ಚಿರತೆ ಅಲ್ಲಿಗೆ ಹೇಗೆ ತಲುಪಿತು ಎಂಬುದನ್ನು ಊಹಿಸಲು ಸಾಧ್ಯವಾಗುವುದಿಲ್ಲ. ಚಿರತೆ ಇರುವ ಮರದ ಕೆಳಗೆ ಜನರು ದೊಡ್ಡ ಪ್ರಮಾಣದಲ್ಲಿ ಸುತ್ತುವರಿದಿದ್ದಾರೆ. ಸುಮಾರು 7-8 ಗಂಟೆಗಳ ಕಾರ್ಯಾಚರಣೆಯ ಬಳಿಕ ಚಿರತೆಯನ್ನು ರಕ್ಷಿಸಲಾಗಿದೆ. ಇದು 2-3 ತಿಂಗಳ ಹಳೆಯ ಪ್ರಕರಣವಾಗಿದೆ ಎಂದು ಅಧಿಕಾರಿ ವಿಡಿಯೋದೊಂದಿಗೆ ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ಪ್ರವಾಸಿಗರಿಗೆ ದರ್ಶನ ನೀಡಿದ ಜೋಡಿ ಚಿರತೆ: ಕೆ.ಗುಡಿಯಲ್ಲಿ ಮಿಂಚಿ ಮರೆಯಾದ ಹುಲಿರಾಯ
Last Updated : Sep 19, 2022, 10:41 AM IST