ರಾಜಸ್ಥಾನ: ಜಲೋರ್‌ನ ಚಿಟಲ್‌ವಾನಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕೆಲ ಪಾಕಿಸ್ತಾನಿ ನಿರಾಶ್ರಿತರನ್ನು ಬಲವಂತವಾಗಿ ಸ್ಥಳಾಂತರಿಸಲಾಗ್ತಿದೆ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಾಕಿಸ್ತಾನಿ ನಿರಾಶ್ರಿತರನ್ನು ಬಲವಂತವಾಗಿ ಸ್ಥಳಾಂತರಿಸುವ ವಿಡಿಯೋ ವೈರಲ್ ಸ್ಥಳೀಯ ಆಡಳಿತ ನೀಡಿದ ಮಾಹಿತಿಯ ಪ್ರಕಾರ, ಪಾಕಿಸ್ತಾನದಿಂದ ಸ್ಥಳಾಂತರಗೊಂಡ ಈ ಕುಟುಂಬಗಳು ಜೋಧಪುರದ ಗುರುತಿನ ಚೀಟಿ ಹೊಂದಿದ್ದಾರೆ. ಫೋನ್ ಕರೆಗಳು ಮತ್ತು ಇತರ ಮಾಹಿತಿಯ ಆಧಾರದ ಮೇಲೆ ಕೇಂದ್ರ ಗುಪ್ತಚರ ಸಂಸ್ಥೆ ಸ್ಥಳೀಯ ಪೊಲೀಸ್ ಮತ್ತು ಆಡಳಿತಕ್ಕೆ ಇವರನ್ನು ಖಾಲಿ ಮಾಡಿಸುವಂತೆ ಸೂಚಿಸಿದೆ. ಆದರೆ ಕೊರೊನಾ ಹಿನ್ನೆಲೆ ಮಾನವೀಯತೆಯ ಆಧಾರದ ಮೇಲೆ ಅವರನ್ನು ಅಲ್ಲಿಯೇ ವಾಸಿಸಲು ಬಿಡಲಾಗಿದೆ. ಸಾಧ್ಯವಾದಷ್ಟು ಸರ್ಕಾರದ ಸಹಾಯವನ್ನು ನೀಡುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಸ್ಥಳೀಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿಯ ಪ್ರಕಾರ, ಜಿಲ್ಲೆಯ ಸರವಾನಾ ಮತ್ತು ಚಿಟಲ್ವಾನಾ ಪೊಲೀಸ್ ಠಾಣೆಗಳು ನಿರ್ಬಂಧಿತ ಪ್ರದೇಶದ ವ್ಯಾಪ್ತಿಗೆ ಬರುತ್ತವೆ. ಈ ಕಾರಣದಿಂದಾಗಿ ಈ ಪ್ರದೇಶಕ್ಕೆ ಬರುವ ಬೇರೆ ನಾಗರಿಕರು ಎಸ್‌ಡಿಎಂನಿಂದ ಅನುಮತಿ ಪಡೆಯಬೇಕಾಗುತ್ತದೆ. ಈ ನಿರಾಶ್ರಿತರು ದೀರ್ಘಕಾಲ ಅನುಮತಿಯಿಲ್ಲದೆ ವಾಸಿಸುತ್ತಿದ್ದು, ಅನುಮಾನಾಸ್ಪದ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಪೊಲೀಸರಿಗೆ ಎಚ್ಚರಿಕೆ ನೀಡಿವೆ ಎನ್ನಲಾಗ್ತಿದೆ.
ನಿರಾಶ್ರಿತರು ಭಾರತ ಸರ್ಕಾರದಿಂದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ವಾಸಸ್ಥಳ ಜೋಧ್ಪುರ ಎಂದು ಉಲ್ಲೇಖಿಸಲಾಗಿದೆ. ಆದರೆ ಉದ್ಯೋಗದ ಹುಡುಕಾಟದಲ್ಲಿ ಇವರು ಚಿಟಲ್ವಾನಾ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವನ್ನು ತಲುಪಿದ್ದಾರೆ. ಸದ್ಯ ಕೊರೊನಾ ಲಾಕ್ಡೌನ್ ಮುಗಿಯುವ ತನಕ ಇವರನ್ನು ಇಲ್ಲಿಯೇ ವಾಸಿಸಲು ಅನುವು ಮಾಡಿಕೊಡಲಾಗಿದೆ.
ಓದಿ:ಅತ್ಯಾಚಾರದ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದ ಎಎಸ್ಐ.. ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆ ಯತ್ನ