ಕರ್ನಾಟಕ

karnataka

ETV Bharat / bharat

ನಿಲ್ಲದ ಅಪರಾಧ ಪ್ರಕರಣಗಳು.. ಯುವಕನಿಗೆ ಹಿಗ್ಗಾಮುಗ್ಗಾ ಥಳಿತ..! - ಉತ್ತರಪ್ರದೇಶದಲ್ಲಿ ಯುವಕನಿಗೆ ಹಿಗ್ಗಾಮುಗ್ಗ ಥಳಿತ

ಉತ್ತರಪ್ರದೇಶದಲ್ಲಿ ಅಪರಾಧ ಪ್ರಕರಣಗಳು ಮುಂದುವರಿದಿದ್ದು, ಕಿಡಿಗೇಡಿಗಳು ಯುವಕನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಿದೆ.

Uttarpradesh Crime news
ಯುವಕನಿಗೆ ಹಿಗ್ಗಾಮುಗ್ಗ ಥಳಿತ..!

By

Published : Jun 15, 2021, 5:31 PM IST

Updated : Jun 15, 2021, 5:46 PM IST

ಗಾಜಿಯಾಬಾದ್: ಯುವಕನಿಗೆ ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋವನ್ನು ಕಿಡಿಗೇಡಿಗಳು ಜಾಲತಾಣಗಳಿಗೆ ಅಪ್ಲೋಡ್ ಮಾಡಿದ್ದಾರೆ. ಯುವಕನನ್ನು ಮನೆಗೆ ಕರೆದುಕೊಂಡು ಹೋಗಿ ಹಾಸಿಗೆಯ ಮೇಲೆ ಮಲಗಿಸಿ, ದೊಣ್ಣೆಯಿಂದ ಮನಬಂದಂತೆ ಥಳಿಸಿದ್ದಾರೆ. ಅಲ್ಲದೇ, ಈ ವೇಳೆ ವಿಡಿಯೋವನ್ನು ಸೋಷಿಯಲ್ ಮೀಡಿಯಾಗಳಿಗೆ ಅಪ್ಲೋಡ್​ ಮಾಡಬೇಕಿದೆ ಎಂದೂ ಮಾತನಾಡಿಕೊಂಡಿದ್ದಾರೆ. ದುಷ್ಕರ್ಮಿಗಳ ಥಳಿತದಿಂದ ಯುವಕನ ಒಂದು ಕಣ್ಣಿಗೆ ಹಾನಿಯಾಗಿದೆ.

ಯುವಕನಿಗೆ ಹಿಗ್ಗಾಮುಗ್ಗಾ ಥಳಿತ..!

ಈ ಕುರಿತು ಯುವಕ, ಮುಸ್ಸೂರಿ ಠಾಣೆಗೆ ದೂರು ನೀಡಿದ್ದಾನೆ. ಆರೋಪಿಗಳು ಕೂಡ ಪ್ರತಿ ದೂರು ದಾಖಲಿಸಿದ್ದು, ಪೊಲೀಸರು ಎರಡೂ ಆಯಾಮಗಳಿಂದ ತನಿಖೆ ನಡೆಸುತ್ತಿದ್ದಾರೆ. ಯುವಕನು ಆರೋಪಿಗಳಿಂದ ಸಾಲ ಪಡೆದಿದ್ದನಂತೆ. ಜತೆಗೆ ಆರೋಪಿಯ ತಂಗಿಯ ಜತೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದರಿಂದ ಥಳಿಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಪೊಲೀಸರು, ಆರೋಪಿಗಳು ಹಾಗೂ ಯುವಕನನ್ನು ವಿಚಾರಣೆಗೆ ಒಳಪಡಿಸಿ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.

ಇದನ್ನೂ ಓದಿ:Viral Video: ಮಸೀದಿಗೆ ತೆರಳುತ್ತಿದ್ದ ವೃದ್ಧನನ್ನು ಥಳಿಸಿ, ಗಡ್ಡ ಕತ್ತರಿಸಿದ ದುಷ್ಕರ್ಮಿಗಳು

Last Updated : Jun 15, 2021, 5:46 PM IST

ABOUT THE AUTHOR

...view details