ಕರ್ನಾಟಕ

karnataka

ETV Bharat / bharat

ರೈಲಿನಿಂದ ಇಳಿಯುವ ಅವಸರ.. ಜಾರಿಬಿದ್ದ ವ್ಯಕ್ತಿ ಪಾಲಿಗೆ ದೇವರಾದ ಆರ್​ಪಿಎಫ್​ ಅಧಿಕಾರಿ - ಕಟಕ್ ರೈಲ್ವೆ ನಿಲ್ದಾಣದ ಸುದ್ದಿ

ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ವ್ಯಕ್ತಿಯನ್ನು ಆರ್‌ಪಿಎಫ್ ಅಧಿಕಾರಿಯೊಬ್ಬರು ರಕ್ಷಿಸಿರುವ ಘಟನೆ ಒಡಿಶಾದ ಕಟಕ್​ನಲ್ಲಿ ನಡೆದಿದೆ.

RPF officer saves life of passenger in Cuttack, Cuttack railway station news, RPF officer news, ಆರ್‌ಪಿಎಫ್ ಅಧಿಕಾರಿ ಕಟಕ್‌ನಲ್ಲಿ ಪ್ರಯಾಣಿಕರ ಜೀವವನ್ನು ಉಳಿಸಿದ್ದಾರೆ, ಕಟಕ್ ರೈಲ್ವೆ ನಿಲ್ದಾಣದ ಸುದ್ದಿ, ಆರ್‌ಪಿಎಫ್ ಅಧಿಕಾರಿ ಸುದ್ದಿ,
ಕಟಕ್

By

Published : Jun 2, 2022, 11:00 AM IST

ಕಟಕ್(ಒಡಿಶಾ): ಕಟಕ್‌ನ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಚಲಿಸುತ್ತಿದ್ದ ರೈಲಿನಿಂದ ಜಾರಿ ಬಿದ್ದ ವ್ಯಕ್ತಿಯೊಬ್ಬರ ಜೀವವನ್ನು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಭದ್ರತಾ ಸಿಬ್ಬಂದಿ ರಕ್ಷಿಸಿರುವ ಘಟನೆ ಬುಧವಾರ ನಡೆದಿದೆ.

ಕಟಕ್ ರೈಲ್ವೆ ನಿಲ್ದಾಣದಲ್ಲಿ ನಡೆದ ದೃಶ್ಯ

ಚಲಿಸುತ್ತಿದ್ದ ರೈಲಿನಿಂದ ಬೀಳುತ್ತಿದ್ದ ವ್ಯಕ್ತಿಯನ್ನು ಸಫೀದ್ ಖಾನ್ ಎಂಬ ಆರ್‌ಪಿಎಫ್ ಭದ್ರತಾ ಪಡೆ ಅಧಿಕಾರಿ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಇಡೀ ಘಟನೆ ಸೆರೆಯಾಗಿದೆ.

ಓದಿ:ಎರಡು ವರ್ಷಗಳ ನಂತರ ಭಾರತ-ಬಾಂಗ್ಲಾ ನಡುವೆ 'ಬಂಧನ್', 'ಮೈತ್ರಿ'ಗೆ ಚಾಲನೆ

ಪುರುಷೋತ್ತಮ್ ಎಕ್ಸ್‌ಪ್ರೆಸ್ ಟ್ರೈನ್​ ಕಟಕ್ ರೈಲು ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 4ಕ್ಕೆ ಆಗಮಿಸುತ್ತಿದ್ದಾಗ ಪ್ರಯಾಣಿಕನೊಬ್ಬ ರೈಲಿನಿಂದ ಇಳಿಯಲು ಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿ ಬೀಳುತ್ತಿದ್ದರು. ಇದನ್ನು ಗಮನಿಸಿದ ಆರ್​ಪಿಎಫ್​ ಅಧಿಕಾರಿ ಅವರನ್ನು ಕಾಪಾಡಿದರು. ಚಲಿಸುತ್ತಿದ್ದ ರೈಲಿನಿಂದ ಬಿದ್ದ ಪ್ರಯಾಣಿಕ ಬಿಹಾರದಿಂದ ಕಟಕ್‌ಗೆ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.

ABOUT THE AUTHOR

...view details