ಕೋಝಿಕ್ಕೋಡ್ :ಆನೆಯ ದಾಳಿಯಿಂದ ತಂದೆಯೊಬ್ಬ ತನ್ನ 4 ವರ್ಷದ ಮಗನನ್ನು ರಕ್ಷಿಸಿದ ಘಟನೆ ಇಲ್ಲಿನ ಗಡಿ ಪ್ರದೇಶ ಪಝಂಪರಂಬು ಎಂಬಲ್ಲಿ ನಡೆದಿದೆ. ಆನೆಯಿಂದ ತನ್ನ ಮಗನನ್ನು ರಕ್ಷಿಸಿದ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತ್ರಿಕ್ಕಲಿಯೂರು ದೇವಸ್ಥಾನದ ಬಳಿ ಕೊಳಕ್ಕಡನ್ ಮಿನಿ ಎಂಬ ಹೆಣ್ಣು ಆನೆಯನ್ನು ಕಟ್ಟಲಾಗಿದೆ. ಆನೆಗೆ ಸ್ವಲ್ಪ ಆಹಾರ ನೀಡಲು ತಂದೆ ನಿರ್ಧರಿಸಿದ್ದಾರೆ. ತಂದೆ ಜೊತೆ ಮಗನೂ ತೆರಳಿದ್ದಾನೆ. ಆಹಾರ ನೀಡುತ್ತಿರುವಾಗ ಆನೆ ತನ್ನ ಸೊಂಡಿಲಿನಿಂದ ಮಗುವನ್ನು ಸುತ್ತಲು ಯತ್ನಿಸಿದೆ. ಇದನ್ನು ನೋಡಿದ ತಂದೆ ಧೈರ್ಯದಿಂದಲೇ ಆನೆ ಎದುರಿಗೆ ಹೋಗಿ ತನ್ನ ಮಗನನ್ನು ಸೊಂಡಿಲಿನಿಂದ ಬಿಡಿಸಿ ಕಾಪಾಡಿದ್ದಾರೆ.