ರೋಹ್ಟಕ್ (ಹರಿಯಾಣ):ಇಲ್ಲಿನ ಕೋಚಿಂಗ್ ಸೆಂಟರ್ ಮುಂಭಾಗದಲ್ಲಿ ಎರಡು ಗುಂಪಿನ ವಿದ್ಯಾರ್ಥಿನಿಯರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಇವರ ರಂಪಾಟದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಡಿಎಲ್‌ಎಫ್ ಕಾಲೋನಿಯಲ್ಲಿ ನಡೆದ ಘಟನೆ ಎನ್ನಲಾಗ್ತಿದೆ.
Viral Video - ರಸ್ತೆಯಲ್ಲೇ 'ಜಡೆ' ಜಗಳ: ಕೋಚಿಂಗ್ ಸೆಂಟರ್ ಮುಂದೆ ವಿದ್ಯಾರ್ಥಿನಿಯರ ಮಾರಾಮಾರಿ! - ರೋಹ್ಟಕ್ ಹುಡುಗಿಯರ ಗಲಾಟೆ ವಿಡಿಯೋ
ಹರಿಯಾಣದ ರೋಹ್ಟಕ್ನಲ್ಲಿ ವಿದ್ಯಾರ್ಥಿನಿಯರ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ವಿದ್ಯಾರ್ಥಿನಿಯರು ಕಿತ್ತಾಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.
ವಿದ್ಯಾರ್ಥಿನಿಯರ ಗಲಾಟೆಯ ವಿಡಿಯೋ ವೈರಲ್
ಗಲಾಟೆಯನ್ನು ತಡೆಯಲೆಂದು ಕೆಲ ವಿದ್ಯಾರ್ಥಿಗಳು ಪ್ರಯತ್ನಿಸಿದರೂ ಸಹ ಪ್ರಯೋಜನವಾಗಿಲ್ಲ. ಈ ಹೊಡೆದಾಟದಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದುಬಂದಿದೆ.
ಡಿಎಲ್‌ಎಫ್ ಕಾಲೋನಿಯಲ್ಲಿ ಅನೇಕ ಕೋಚಿಂಗ್ ಸೆಂಟರ್ಗಳಿದ್ದು, ಅಲ್ಲಿಗೆ ಬಂದ ವಿದ್ಯಾರ್ಥಿನಿಯರು ಈ ರೀತಿ ಕಿತ್ತಾಡಿಕೊಂಡಿದ್ದಾರೆ ಎಂದು ಹೇಳಲಾಗ್ತಿದೆ. ಈ ಜಡೆ ಜಗಳಕ್ಕೆ ಕಾರಣ ಏನು ಅನ್ನೋದು ತಿಳಿದುಬಂದಿಲ್ಲ.
Last Updated : Aug 22, 2021, 10:17 AM IST