ಭಾಗಲ್ಪುರ್ (ಬಿಹಾರ) :ಭಾಗಲ್ಪುರದ ರೈಲಿನಲ್ಲಿ ಮಹಿಳೆಯೊಬ್ಬರ ಪರ್ಸ್ವೊಂದನ್ನು ಕದ್ದ ಕಳ್ಳನನ್ನು ಪ್ರಯಾಣಿಕರು ಹಿಡಿದಿದ್ದಾರೆ. ಚಲಿಸುತ್ತಿದ್ದ ರೈಲಿನ ಕಿಟಕಿಯಲ್ಲಿ ಕಳ್ಳ ನೇತಾಡುತ್ತಿರುವ ದೃಶ್ಯವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಕಿಟಕಿಯಲ್ಲಿ ನೇತಾಡುತ್ತಿರುವ ಕಳ್ಳ : ರೈಲಿನ ಕಿಟಕಿಯಲ್ಲಿ ನೇತಾಡುತ್ತಿರುವ ಕಳ್ಳನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ರೈಲಿನಲ್ಲಿ ಪರ್ಸ್ ಕದಿಯುತ್ತಿದ್ದಾಗ ಜನ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ. ಅಷ್ಟೇ ಅಲ್ಲ, ಚಲಿಸುತ್ತಿದ್ದ ರೈಲಿನ ಕಿಟಕಿಗೆ ಕಳ್ಳ ನೇತುಹಾಕಿಕೊಂಡಿದ್ದರಿಂದ ಜನ ಅವನಿಗೆ ಥಳಿಸುತ್ತಲೇ ಇರುವುದು ವಿಡಿಯೋದಲ್ಲಿ ಕಂಡುಬಂದಿದೆ. ವಾಸ್ತವವಾಗಿ, ರೈಲಿನಲ್ಲಿ ಒಬ್ಬ ಮಹಿಳೆ ಫೋನ್ನಲ್ಲಿ ಮಾತನಾಡುತ್ತಿದ್ದರು. ಅದನ್ನು ಗಮನಿಸಿರುವ ಕಳ್ಳ ಕ್ಷಣಮಾತ್ರದಲ್ಲಿಯೇ ಆ ಪರ್ಸ್ ಕಸಿದುಕೊಂಡು ಓಡಿ ಹೋಗಲು ಯತ್ನಿಸಿದ್ದಾನೆ. ಈ ವೇಳೆ ರೈಲಿನಲ್ಲಿ ಕುಳಿತಿದ್ದ ಪ್ರಯಾಣಿಕರು ಕಳ್ಳನನ್ನು ಹಿಡಿದಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ವೈರಲ್ ಆಗುತ್ತಿರುವ ವಿಡಿಯೋ :ಚಲಿಸುತ್ತಿದ್ದ ರೈಲಿನ ಕಿಟಕಿಯಲ್ಲಿ ಕಳ್ಳ ನೇತಾಡುತ್ತಿರುವ ದೃಶ್ಯವನ್ನು ಕೆಲವು ಪ್ರಯಾಣಿಕರು ತಮ್ಮ ಫೋನ್ ಕ್ಯಾಮೆರಾಗಳಲ್ಲಿ ಸೆರೆಹಿಡಿದಿದ್ದಾರೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ಬಗ್ಗೆ ಭಾಗಲ್ಪುರ ರೈಲ್ವೇ ಆರ್‌ಪಿಎಫ್ ಇನ್ಸ್ಪೆಕ್ಟರ್ ರಣಧೀರ್ ಕುಮಾರ್ ಅವರನ್ನು ಭೇಟಿ ಮಾಡಿದಾಗ, ಅಂತಹ ಯಾವುದೇ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ, ನಾವು ತನಿಖೆ ನಡೆಸುತ್ತಿದ್ದೇವೆ, ನಾವು ಜಿಆರ್‌ಪಿಯೊಂದಿಗೆ ಮಾತನಾಡುತ್ತಿದ್ದೇವೆ. ಅಂತಹ ಕೆಲವು ಪ್ರಕರಣಗಳು ನಮ್ಮ ಬಳಿಗೆ ಬಂದಿವೆ. ಈ ಬಗ್ಗೆ ಗಮನಿಸಿ, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಾಗುವುದು ಎಂದಿದ್ದಾರೆ.