ಯಾರಾದರೂ ಕಷ್ಟದಲ್ಲಿದ್ದಾಗ ದೇವರು ಯಾವುದಾದರೂ ಒಂದು ರೂಪದಲ್ಲಿ ಬಂದು ಕಾಪಾಡುತ್ತಾನೆ ಎಂಬುದು ನಂಬಿಕೆ ಇರುತ್ತದೆ. ಸಂಕಷ್ಟದಲ್ಲಿ ಕೇವಲ ಮನುಷ್ಯರಷ್ಟೇ ಅಲ್ಲ, ಪ್ರಾಣಿಗಳೂ ಸಹ ಸಹಾಯಕ್ಕೆ ಬರುತ್ತವೆ. ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವೈರಲ್ ವಿಡಿಯೋದಲ್ಲಿ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ಪುಟ್ಟ ಆನೆ ಮರಿಯೊಂದು ರಕ್ಷಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವ್ಯಕ್ತಿಯನ್ನು ಕಾಪಾಡಲು ಪುಟ್ಟ ಆನೆಯೊಂದು ತನ್ನ ಪ್ರಾಣವನ್ನೇ ಪಣಕ್ಕಿಟ್ಟಿರುವುದನ್ನು ಕಾಣಬಹುದು. ಈ ವಿಡಿಯೋದಲ್ಲಿ ಆನೆಗಳ ಹಿಂಡು ನದಿ ದಡದಲ್ಲಿ ಇರುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆಗುತ್ತಿರುವುದು ಇದೇ ಮೊದಲಲ್ಲ. ಇದನ್ನು ಮೂಲತಃ 2016 ರಲ್ಲಿ Elephant News ಎಂಬ ಯೂಟ್ಯೂಬ್ ಚಾನಲ್ ಹಂಚಿಕೊಂಡಿತ್ತು.