ಕರ್ನಾಟಕ

karnataka

ETV Bharat / bharat

ಬಂದೂಕು ಹಿಡಿದು ಚುನಾವಣಾ ಪ್ರಚಾರ.. ಜಾರ್ಖಂಡ್​ ರಾಜಕೀಯದಲ್ಲಿ ಕೋಲಾಹಲ

ಜಾರ್ಖಂಡ್​ ಜಿಲ್ಲಾ ಪರಿಷತ್​ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ಬಂದೂಕು ಸಮೇತ ಪ್ರಚಾರ ನಡೆಸಿದ ವಿಡಿಯೋ ವೈರಲ್ ಆಗಿದೆ. ಇದು ಮತದಾರರನ್ನು ಬೆದರಿಸುವ ಕ್ರಮವಾಗಿದೆ ಎಂದು ಬಿಜೆಪಿ ಟೀಕಿಸಿದೆ.

video-of-election-campaigning
ಬಂದೂಕು ಹಿಡಿದು ಚುನಾವಣಾ ಪ್ರಚಾರ

By

Published : May 23, 2022, 7:09 PM IST

Updated : May 23, 2022, 7:19 PM IST

ಸಾಹಿಬ್‌ಗಂಜ್(ಜಾರ್ಖಂಡ್​):ಜಿಲ್ಲಾ ಪರಿಷತ್​ ಚುನಾವಣೆಯಲ್ಲಿ ಅಭ್ಯರ್ಥಿಯೊಬ್ಬರು ನಡೆಸಿದ ಪ್ರಚಾರದ ವೇಳೆ ಬೆಂಬಲಿಗರ ಕೈಯಲ್ಲಿ ಬಂದೂಕು ಇರುವ ವಿಡಿಯೋ ವೈರಲ್ ಆಗಿದೆ. ಇದು ಜಾರ್ಖಂಡ್​ನ ಸಾಹಿಬ್​ಗಂಜ್​ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲಾ ಪರಿಷತ್ ಅಭ್ಯರ್ಥಿ ಸುನೀಲ್ ಯಾದವ್ ಎಂಬುವವರು ಬಂದೂಕು ಸಮೇತ ಚುನಾವಣಾ ಪ್ರಚಾರ ನಡೆಸಿದ್ದಾರೆ. ಈ ವಿಡಿಯೋವನ್ನು ಬಿಜೆಪಿ ಮುಖಂಡ ಬಾಬುಲಾಲ್ ಮರಾಂಡಿ ಅವರು ಟ್ವೀಟ್ ಮಾಡಿದ್ದು, ರಾಜಕೀಯ ವಲಯದಲ್ಲಿ ಕೋಲಾಹಲ ಎಬ್ಬಿಸಿದೆ.

ಬಂದೂಕು ಹಿಡಿದು ಚುನಾವಣಾ ಪ್ರಚಾರ

ಬಿಜೆಪಿ ಮುಖಂಡರ ಈ ಟ್ವೀಟ್​ನಿಂದ ಸರ್ಕಾರದ ವಿರುದ್ಧ ಹಲವು ಅನುಮಾನಗಳು ಮೂಡಿವೆ. ಅಲ್ಲದೇ, ಇದು ಸಾಹಿಬ್‌ಗಂಜ್‌ನಲ್ಲಿ ನಡೆದ ಜಿಲ್ಲಾ ಪರಿಷತ್ ಚುನಾವಣಾ ಪ್ರಚಾರದ ಮಾದರಿ. ಇದು ಜಾರ್ಖಂಡ್ ಮುಖ್ಯಮಂತ್ರಿಗೆ ಚಿನ್ನ ಸುರಿಯುವ ಮಳೆಯಾಗಿದೆ. ಮಾರಕಾಯುಧ ಹಿಡಿದು ಮತದಾರರಿಗೆ ಬೆದರಿಕೆ ಹಾಕುತ್ತಿರುವವರು ಯಾರು? ಈ ಗೂಂಡಾಗಿರಿ, ಮಾಫಿಯಾಗಿರಿಯನ್ನು ಕೊನೆಗಾಣಿಸಿ ಎಂದು ಬರೆದುಕೊಂಡಿದ್ದಾರೆ.

ಟ್ವೀಟ್ ವೈರಲ್​ ಬಳಿಕ ಕ್ರಮ:ಬಂದೂಕು ಹಿಡಿದು ಪ್ರಚಾರ ನಡೆಸಿದ ವಿಡಿಯೋ ವೈರಲ್​ ಆದ ಬಳಿಕ ಈ ಬಗ್ಗೆ ಕ್ರಮಕ್ಕೆ ಮುಂದಾದ ಪೊಲೀಸರು ಅಭ್ಯರ್ಥಿಯ ಬೆಂಬಲಿಗರಿಂದ 7 ಪಿಸ್ತೂಲುಗಳನ್ನು ಜಪ್ತಿ ಮಾಡಿದ್ದಾರೆ. ಚುನಾವಣಾ ಪ್ರಚಾರದ ವೇಳೆ ಆಯುಧಗಳನ್ನು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಫಾಸಿಲ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಓದಿ:ಜ್ಞಾನವಾಪಿ ಮಸೀದಿ ವಿವಾದ: ವಾದ ಆಲಿಸಿ ತೀರ್ಪು ಕಾಯ್ದಿರಿಸಿದ ವಾರಾಣಸಿ ಕೋರ್ಟ್.. ನಾಳೆ ಆದೇಶ ಸಂಭವ

Last Updated : May 23, 2022, 7:19 PM IST

ABOUT THE AUTHOR

...view details