ರೂರ್ಕಿ (ಉತ್ತರಾಖಂಡ್): ಮಾಟಮಂತ್ರ ಮಾಡುವ ಶಂಕೆ ಮೇರೆಗೆ ಮಹಿಳೆಯೊಬ್ಬರಿಗೆ ಥಳಿಸಿರುವ ಘಟನೆ ಉತ್ತರಾಖಂಡ್ನ ಹರಿದ್ವಾರ ಜಿಲ್ಲೆಯ ಮಂಗಳೂರು ಕೊತ್ವಾಲಿ ಸಮೀಪದ ಲಿಬರಹೇಡಿ ಗ್ರಾಮದಲ್ಲಿ ನಡೆದಿದೆ. ಮಹಿಳೆಯ ಚೀಲದಲ್ಲಿ ಪ್ರಾಣಿಯೊಂದರ ಮೂಳೆಯೂ ಪತ್ತೆಯಾಗಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇಲ್ಲಿನ ಮನೆಯೊಂದಕ್ಕೆ ಪ್ರವೇಶಿಸಿದ ಅಪರಿಚಿತ ಮಹಿಳೆ ಮನೆಯ ಮಾಲಕಿಯೊಂದಿಗೆ ಮಾತುಕತೆ ಆರಂಭಿಸಿದ್ದಾಳೆ. ಸ್ವಲ್ಪ ಸಮಯದ ಬಳಿಕ ಮನೆಯ ಮಾಲಕಿಯ ಆರೋಗ್ಯ ಹದಗೆಟ್ಟಿದೆ. ಅಷ್ಟರಲ್ಲಿ ಸಂಬಂಧಿಕರು ಮನೆಗೆ ಬಂದಿದ್ದಾರೆ. ಇದೇ ವೇಳೆ ಮನೆ ಒಡತಿಯ ಆರೋಗ್ಯ ಹದಗೆಟ್ಟಿದ್ದನ್ನು ಕಂಡು ಸಂಬಂಧಿಕರು ದಿಗ್ಭ್ರಮೆಗೊಂಡಿದ್ದಾರೆ. ಆಗ ಮನೆಯಲ್ಲಿದ್ದ ಅಪರಿಚಿತ ಮಹಿಳೆಯನ್ನು ಹಿಡಿದು ವಿಚಾರಣೆ ನಡೆಸಿದ್ದಾರೆ.