ಕರ್ನಾಟಕ

karnataka

ETV Bharat / bharat

ಶಾಸಕರನ್ನು ಎತ್ತಿ, ಎಳೆದು ಅಸೆಂಬ್ಲಿಯಿಂದ ಹೊರ ಹಾಕಿದ ಮಾರ್ಷಲ್​ಗಳು! ವಿಡಿಯೋ ನೋಡಿ

ಶಿಕ್ಷಕರ ನೇಮಕಾತಿ ನಿಯಮಾವಳಿಗಳನ್ನು ವಿರೋಧಿಸಿ ವಿಧಾನಸಭೆಯಲ್ಲಿ ಪ್ರತಿಭಟನೆ ನಡೆಸಿದ ಇಬ್ಬರು ಬಿಜೆಪಿ ಶಾಸಕರನ್ನು ಬಿಹಾರ ವಿಧಾನಸಭೆಯಿಂದ ಬಲವಂತವಾಗಿ ಎಳೆದು ಹೊರಹಾಕಲಾಯಿತು.

ವೀಡಿಯೊ: ಶಾಸಕರನ್ನು ಎತ್ತಿ, ಎಳೆದು ಅಸೆಂಬ್ಲಿಯಿಂದ ಹೊರ ಹಾಕಿದ ಮಾರ್ಷಲ್​ಗಳು!
ವೀಡಿಯೊ: ಶಾಸಕರನ್ನು ಎತ್ತಿ, ಎಳೆದು ಅಸೆಂಬ್ಲಿಯಿಂದ ಹೊರ ಹಾಕಿದ ಮಾರ್ಷಲ್​ಗಳು!

By

Published : Jul 13, 2023, 1:06 PM IST

ಪಾಟ್ನಾ (ಬಿಹಾರ) :ರಾಜ್ಯದಲ್ಲಿ ಶಿಕ್ಷಕರ ನೇಮಕಾತಿಯ ಬಗ್ಗೆ ಸದನದಲ್ಲಿ ಪ್ರಶ್ನೆ ಎತ್ತಿದ ಇಬ್ಬರು ಬಿಜೆಪಿ ಶಾಸಕರನ್ನು ರಾಜ್ಯ ವಿಧಾನಸಭೆಯಿಂದ ಬಲವಂತವಾಗಿ ಹೊರಹಾಕಲಾಯಿತು. ಈ ವಿಷಯದ ಬಗ್ಗೆ ಗಮನ ಸೆಳೆಯಲು ಯತ್ನಿಸಿದ ಶಾಸಕರನ್ನು ವಿಧಾನಸಭೆಯ ಅಧಿವೇಶನದ ವೇಳೆ ಮಾರ್ಷಲ್‌ಗಳ ಮೂಲಕ ಹೊರ ಹಾಕಲಾಯಿತು. ಬಿಜೆಪಿ ಶಾಸಕರನ್ನು ಮಾರ್ಷಲ್​ಗಳು ಬಲವಂತವಾಗಿ ಎಳೆದು, ಎತ್ತಿಕೊಂಡು ಹೋಗುವ ದೃಶ್ಯಗಳು ವಿಡಿಯೋದಲ್ಲಿ ಕಾಣಿಸುತ್ತಿವೆ.

ಹೊಸ ಶಿಕ್ಷಕರ ನೇಮಕಾತಿ ನಿಯಮಗಳ ವಿರುದ್ಧ ಮತ್ತು 10 ಲಕ್ಷ ಉದ್ಯೋಗಗಳ ವಿಷಯವಾಗಿ ಬಿಜೆಪಿ ಪಾಟ್ನಾದಲ್ಲಿ ವಿಧಾನಸಭಾ ಚಲೋ ಮೆರವಣಿಗೆ ನಡೆಸುತ್ತಿದೆ. ರಾಜ್ಯಾದ್ಯಂತ ಸಾವಿರಾರು ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಶಿಕ್ಷಕರ ನೇಮಕಾತಿ ನಿಯಮ, ಉದ್ಯೋಗ, ಅಗವಾಣಿ ಸೇತುವೆ ಅಪಘಾತ, ಭ್ರಷ್ಟಾಚಾರ ಹಾಗೂ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಬಿಜೆಪಿ ಮಹಾಮೈತ್ರಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದೆ.

ಮತ್ತೊಂದೆಡೆ, ಮುಂಗಾರು ಅಧಿವೇಶನದಲ್ಲಿ ಗದ್ದಲದ ನಂತರ ಬಿಜೆಪಿ ಉಭಯ ಸದನಗಳಿಂದ ಸಭಾತ್ಯಾಗ ಮಾಡಿದೆ. ನಾಯಕರೆಲ್ಲ ಗಾಂಧಿ ಮೈದಾನ ತಲುಪಿದ್ದಾರೆ. ಇಲ್ಲಿಂದ ಬಿಜೆಪಿ ರಾಜ್ಯಾಧ್ಯಕ್ಷ ಸಾಮ್ರಾಟ್ ಚೌಧರಿ ನೇತೃತ್ವದಲ್ಲಿ ಪಾದಯಾತ್ರೆ ಆರಂಭವಾಗಿದೆ. ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ದ.ಕ. ಬಂಗಲೆ ಚೌರಾಹಾ, ಆದಾಯ ತೆರಿಗೆ ಗೋಲಂಬರ್ ಮೂಲಕ ವಿಧಾನಸಭೆ ತಲುಪಲಿದ್ದಾರೆ. ಪಾಟ್ನಾದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ.

ಪ್ರತಿಭಟನಾಕಾರರನ್ನು ತಡೆಯಲು ಪಾಟ್ನಾ ಪೊಲೀಸರು ಎಲ್ಲ ಕಡೆ ಬ್ಯಾರಿಕೇಡ್ ಅಳವಡಿಸಿದ್ದಾರೆ. ಗಾಂಧಿ ಮೈದಾನದಿಂದ ವಿಧಾನಸೌಧದವರೆಗೆ 40 ದಂಡಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಇದೇ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಕೂಡ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಮಾಜಿ ಉಪ ಮುಖ್ಯಮಂತ್ರಿ ಸುಶೀಲ್ ಮೋದಿ, ಕೇಂದ್ರ ಸಚಿವ ಅಶ್ವಿನಿ ಚೌಬೆ ಸೇರಿದಂತೆ ಹೆಚ್ಚಿನ ಸಂಖ್ಯೆಯ ಶಾಸಕರು, ಸಂಸದರು, ರಾಜ್ಯದ ಅಧಿಕಾರಿಗಳು ಮತ್ತು ಇತರ ನಾಯಕರು ವಿಧಾನಸಭೆ ಮೆರವಣಿಗೆಯಲ್ಲಿ ಭಾಗವಹಿಸಿದ್ದಾರೆ.

ನಿನ್ನೆ ಅಂದರೆ ಜು.12 ರಂದು ಕೂಡ ಬಿಹಾರ ವಿಧಾನಸಭೆಯಲ್ಲಿ ಭಾರಿ ಕೋಲಾಹಲ ನಡೆದಿತ್ತು. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದ ನಾಯಕರು ಮತ್ತು ಶಾಸಕರು ಪ್ರತಿಭಟನೆ ನಡೆಸಿದರು. 11 ಗಂಟೆಗೆ ಸದನ ಸಭೆ ಸೇರಿದ ತಕ್ಷಣ ಬಿಜೆಪಿ ಶಾಸಕರು ಘೋಷಣೆಗಳನ್ನು ಕೂಗುತ್ತ ಬಾವಿಯೊಳಗೆ ಪ್ರವೇಶಿಸಿದರು ಮತ್ತು ಕುರ್ಚಿಗಳನ್ನು ಮುರಿದರು.

ವಿಧಾನಸಭೆ ಕಲಾಪ ಮುಂದೂಡುವಂತೆ ಅವರು ಸ್ಪೀಕರ್‌ಗೆ ಆಗ್ರಹಿಸಿದರು. ಜುಲೈ 12 ರಂದು ಸತತ ಎರಡನೇ ದಿನ, ಬಿಹಾರ ವಿಧಾನ ಪರಿಷತ್ತಿನಲ್ಲಿ ಅಶಿಸ್ತಿನ ನಡವಳಿಕೆಯ ಕಾರಣದಿಂದ ಕಲಾಪ ಕೆಲವೇ ನಿಮಿಷಗಳಲ್ಲಿ ಕಲಾಪವನ್ನು ಮುಂದೂಡಲಾಯಿತು. ಉದ್ಯೋಗಕ್ಕಾಗಿ ಭೂ ಹಗರಣ ಪ್ರಕರಣದಲ್ಲಿ ಸಿಬಿಐ ಚಾರ್ಜ್‌ಶೀಟ್ ನಂತರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ರಾಜೀನಾಮೆಗೆ ಒತ್ತಾಯಿಸಿರುವ ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿದೆ. ಬಿಜೆಪಿ ಜತೆಗೆ ಶಿಕ್ಷಕರ ಅಭ್ಯರ್ಥಿಗಳೂ ಪ್ರತಿಭಟನೆಗಿಳಿದಿದ್ದಾರೆ. ವಸತಿ ನೀತಿ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿ ವಿರುದ್ಧ ಶಿಕ್ಷಕ ಅಭ್ಯರ್ಥಿಗಳು ವಿಧಾನಸೌಧ ಚಲೋ ನಡೆಸಲಿದ್ದಾರೆ.

ಇದನ್ನೂ ಓದಿ : BSE Sensex: ಮೊದಲ ಬಾರಿಗೆ 66,000 ಗಡಿ ಮೀರಿ ಹೊಸ ದಾಖಲೆ!

ABOUT THE AUTHOR

...view details