ಕರ್ನಾಟಕ

karnataka

ETV Bharat / bharat

ಹೈದರಾಬಾದ್ ICRISAT ಭೇಟಿ ವೇಳೆ ಕಡಲೆ ಕಾಯಿ ರುಚಿ ನೋಡಿದ ಪ್ರಧಾನಿ ಮೋದಿ: ವಿಡಿಯೋ ವೈರಲ್​

ಪ್ರಧಾನಿ ಮೋದಿ ಹೈದರಾಬಾದ್​ನ ICRISAT ಭೇಟಿ ವೇಳೆ ಕುತೂಹಲಕಾರಿ ಘಟನೆಯೊಂದು ನಡೆದಿದೆ. ICRISAT ಫಾರ್ಮ್‌ಗೆ ಭೇಟಿ ನೀಡಿದ ಪ್ರಧಾನಿ ,ಕಡಲೆ ಕಾಯಿ ಕೊಯ್ದು ರುಚಿ ನೋಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ವೈರಲ್​ ವಿಡಿಯೋ
ವೈರಲ್​ ವಿಡಿಯೋ

By

Published : Feb 6, 2022, 12:32 PM IST

ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರ ಹೈದರಾಬಾದ್ ಭೇಟಿ ಹಲವು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಗಿದೆ. ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ (ICRISAT) ಕೇಂದ್ರ ಉದ್ಘಾಟನೆ ಬಳಿಕ ಫಾರ್ಮ್​ಗೆ ತೆರಳಿದ ಪ್ರಧಾನಿ, ಗಿಡದಿಂದ ಕಡಲೆ ಬಿಡಿಸಿ, ತಿಂದು ರುಚಿ ನೋಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.

ICRISAT ಕ್ಯಾಂಪಸ್​​​ನ ಅಂತಾರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆಯ 50ನೇ ವಾರ್ಷಿಕೋತ್ಸವ ಆಚರಣೆ ಹಿನ್ನೆಲೆ ಶನಿವಾರ ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಭಾಗಿಯಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ICRISAT ಲೋಗೋವನ್ನು ಅನಾವರಣಗೊಳಿಸಿದರು. ಈ ಸಂದರ್ಭದ ಸ್ಮರಣಾರ್ಥವಾಗಿ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು. ಈ ವೇಳೆ ತಮಿಳಿಸಾಯಿ ಸೌಂದರರಾಜನ್, ಕೇಂದ್ರ ಸಚಿವರಾದ ನರೇಂದ್ರ ಸಿಂಗ್ ತೋಮರ್ ಮತ್ತು ಜಿ.ಕಿಶನ್ ರೆಡ್ಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವೈರಲ್​ ವಿಡಿಯೋ

ICRISAT ಕಾರ್ಯಕ್ರಮ ಮುಗಿಸಿ ಶ್ರೀರಾಮಾನುಜಾಚಾರ್ಯರ ಪ್ರತಿಮೆ ಅನಾವರಣ ಹಾಗೂ ದೇಗುಲ ದರ್ಶನಕ್ಕೆ ತೆರಳುವ ವೇಳೆ ಮೋದಿ ದಿಢೀರ್ ICRISAT ಫಾರ್ಮ್‌ಗೆ ಭೇಟಿ ನೀಡಿದರು. ಈ ವೇಳೆ ಫಾರ್ಮ್‌ನಲ್ಲಿದ್ದ ವಿವಿಧ ಬೆಳೆಗಳ ಮಾಹಿತಿ ಪಡೆದುಕೊಂಡರು. ಅಷ್ಟೇ ಅಲ್ಲದೆ ಬೆಳೆದಿದ್ದ ಕಡಲೆ ಬೀಜ ರುಚಿ ನೋಡಿ ಸಂತಸ ಹಂಚಿಕೊಂಡರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಓದಿ:ಭಾರತದ ಅಭಿವೃದ್ಧಿಯ ಬಗ್ಗೆ ಲತಾ ಮಂಗೇಶ್ಕರ್ ಉತ್ಸುಕರಾಗಿದ್ದರು: ಪ್ರಧಾನಿ ಮೋದಿ ಸಂತಾಪ

ABOUT THE AUTHOR

...view details