ಕರ್ನಾಟಕ

karnataka

ETV Bharat / bharat

Watch : ಮೆಟ್ರೋ ನಿಲ್ದಾಣದ ಗ್ರಿಲ್​ನಲ್ಲಿ ಸಿಲುಕಿಕೊಂಡ ಬಾಲಕಿಯ ರಕ್ಷಣೆ

ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ಎಂಟು ವರ್ಷದ ಬಾಲಕಿ ಆಟವಾಡುತ್ತಿದ್ದಾಗ ನೆಲದಿಂದ 25 ಅಡಿ ಎತ್ತರದ ಗ್ರಿಲ್‌ನಲ್ಲಿ ಸಿಲುಕಿಕೊಂಡಿದ್ದಾಳೆ. ಸುರಕ್ಷಿತ ಸ್ಥಳಕ್ಕೆ ಬಾಲಕಿಯನ್ನು ಕರೆತರುವಲ್ಲಿ ಸಿಐಎಸ್‌ಎಫ್ ಸಿಬ್ಬಂದಿ ಯಶಸ್ವಿಯಾಗಿದ್ದಾರೆ..

ಮೆಟ್ರೋ ನಿಲ್ದಾಣದ ಗ್ರಿಲ್​ನಲ್ಲಿ ಸಿಲುಕಿಕೊಂಡ ಬಾಲಕಿಯ ರಕ್ಷಣೆ
ಮೆಟ್ರೋ ನಿಲ್ದಾಣದ ಗ್ರಿಲ್​ನಲ್ಲಿ ಸಿಲುಕಿಕೊಂಡ ಬಾಲಕಿಯ ರಕ್ಷಣೆ

By

Published : Feb 28, 2022, 2:21 PM IST

ನವದೆಹಲಿ :ರಾಷ್ಟ್ರ ರಾಜಧಾನಿ ದೆಹಲಿಯ ಮೆಟ್ರೋ ನಿಲ್ದಾಣದಲ್ಲಿ ಗ್ರಿಲ್​ನಲ್ಲಿ ಸಿಲುಕಿಕೊಂಡ ಬಾಲಕಿಯನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಸಿಬ್ಬಂದಿ ರಕ್ಷಿಸಿದ್ದಾರೆ.

ನಿನ್ನೆ ಸಂಜೆ 6 ಗಂಟೆ ವೇಳೆಗೆ ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದಲ್ಲಿ ಎಂಟು ವರ್ಷದ ಬಾಲಕಿ ಆಟವಾಡುತ್ತಿದ್ದಾಗ ನೆಲದಿಂದ 25 ಅಡಿ ಎತ್ತರದ ಗ್ರಿಲ್‌ನಲ್ಲಿ ಸಿಲುಕಿದ್ದಾಳೆ. ಮಾಹಿತಿ ಬಂದ ಕೂಡಲೇ ಸಿಐಎಸ್‌ಎಫ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಹರಸಾಹಸಪಟ್ಟು ಸುರಕ್ಷಿತ ಸ್ಥಳಕ್ಕೆ ಬಾಲಕಿಯನ್ನು ಕರೆತರುವಲ್ಲಿ ಯಶಸ್ವಿಯಾಗಿದ್ದಾರೆ.

ಮೆಟ್ರೋ ನಿಲ್ದಾಣದ ಗ್ರಿಲ್​ನಲ್ಲಿ ಸಿಲುಕಿಕೊಂಡ ಬಾಲಕಿಯ ರಕ್ಷಣೆ

ಇದನ್ನೂ ಓದಿ: ಉಡುಪಿ : ಸೈಕಲ್ ತುಳಿದು ಸೈಕ್ಲಿಸ್ಟ್​ಗಳ ನಿಬ್ಬೆರಗಾಗಿಸಿದ ಪೇಜಾವರ ಸ್ವಾಮೀಜಿ

ಈ ಪುಟ್ಟ ಹುಡುಗಿಯು ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಅಡಿಯಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ರಕ್ಷಣೆಯ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಐಎಸ್‌ಎಫ್ ಸಿಬ್ಬಂದಿ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

For All Latest Updates

ABOUT THE AUTHOR

...view details