ಬನಾರಸ್(ಉತ್ತರಪ್ರದೇಶ):ಇಲ್ಲಿನ ಬನಾರಸ್ ಗಂಗಾ ನದಿ ದಡದಲ್ಲಿ ಭಿಕ್ಷೆ ಬೇಡುವ ದಕ್ಷಿಣ ಭಾರತದ ಮಹಿಳೆಯೊಬ್ಬರು ಹಿಂದಿ, ಇಂಗ್ಲಿಷ್ಅನ್ನು ನಿರರ್ಗಳವಾಗಿ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರನ್ನು ಬೆರಗಾಗಿಸಿದೆ.
ಇಂಗ್ಲಿಷ್ ಮಾತನಾಡುವ ಮಹಿಳೆಯ ಹೆಸರು ಸ್ವಾತಿ ಎನ್ನಲಾಗ್ತಿದೆ. ಆಕೆ ತನ್ನದು ದಕ್ಷಿಣ ಭಾರತ ಎಂದು ಹೇಳಿಕೊಂಡಿದ್ದಾಳೆ. ಅಲ್ಲದೇ, ತಾನು ಕಂಪ್ಯೂಟರ್ ಸೈನ್ಸ್ನಲ್ಲಿ ಪದವಿ ಪಡೆದಿದ್ದೇನೆ. ತನಗೆ 3 ವರ್ಷಗಳ ಹಿಂದೆ ಮದುವೆಯಾಗಿತ್ತು. ಒಂದು ಹೆಣ್ಣು ಮಗು ಕೂಡ ಜನಿಸಿತ್ತು. ಅನಾರೋಗ್ಯದಿಂದ ಮಗು ಸಾವನ್ನಪ್ಪಿತು. ಈ ಮಧ್ಯೆ ನಾನು ಪಾರ್ಶ್ವವಾಯು ರೋಗಕ್ಕೆ ತುತ್ತಾದ ಕಾರಣ ಬಲಗೈ ಕಳೆದುಕೊಂಡಿದ್ದೇನೆ. ಬಳಿಕ ಮನೆಯವರು ನನ್ನನ್ನು ಹೊರಹಾಕಿದರು. ಮೋಕ್ಷಕ್ಕಾಗಿ ಎಲ್ಲರೂ ಕಾಶಿಗೆ ಬರುತ್ತಾರೆ. ಅದರಂತೆ ನಾನು ಇಲ್ಲಿಯೇ ಮೋಕ್ಷ ಹೊಂದಲು ಬಂದಿದ್ದೇನೆ ಎಂದು ತಿಳಿಸಿದ್ದಾಳೆ.