ಕರ್ನಾಟಕ

karnataka

ETV Bharat / bharat

ಜಮೀನು ವಿವಾದ: ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ.. Viral Video - ಕುಟುಂಬಗಳ ನಡುವೆ ಮಾರಣಾಂತಿಕ ಹಲ್ಲೆ

ಆಸ್ತಿ ವಿಚಾರವಾಗಿ ಗಲಾಟೆ ನಡೆದು ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನೆ ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್​ಪುರದಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

video-goes-viral-of-beating-men-for-property-dispute-in-delhi
ಜಮೀನು ವಿವಾದ: ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ.. Viral Video

By

Published : Feb 12, 2022, 1:19 PM IST

ನವದೆಹಲಿ:ಎರಡು ಕುಟುಂಬಗಳ ನಡುವೆ ಆಸ್ತಿ ವಿಚಾರವಾಗಿ ನಡೆದ ಗಲಾಟೆ ರಕ್ತ ಸಿಕ್ತವಾಗಿ ಕೊನೆಗೊಂಡಿರುವ ಘಟನೆ ಈಶಾನ್ಯ ದೆಹಲಿಯ ನ್ಯೂ ಉಸ್ಮಾನ್​ಪುರದಲ್ಲಿ ನಡೆದಿದೆ. ಒಂದು ಕುಟುಂಬ ಜನರು ಮತ್ತೊಂದು ಕುಟುಂಬದವರನ್ನು ತೀವ್ರವಾಗಿ ಥಳಿಸಿದ್ದು, ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಈ ದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವಿಧ ಸೆಕ್ಷನ್ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ನ್ಯೂ ಉಸ್ಮಾನ್‌ಪುರದ ಸ್ಟ್ರೀಟ್ ನಂಬರ್ 2ರಲ್ಲಿ ವಾಸಿಸುತ್ತಿರುವ ಜಗತ್ ಸಿಂಗ್ ಮತ್ತು ಶ್ಯಾಮ್‌ವೀರ್ ಕುಟುಂಬದ ನಡುವೆ ಈ ಘರ್ಷಣೆ ನಡೆದಿದೆ.

ವೈರಲ್ಲಾದ ವಿಡಿಯೋ

ಉಸ್ಮಾನ್‌ಪುರ ಪೊಲೀಸ್ ಠಾಣೆಯಲ್ಲಿ ಎರಡೂ ಕಡೆಯಿಂದ ಪ್ರಕರಣ ದಾಖಲಾಗಿದೆ. ಶುಕ್ರವಾರ ಸಂಜೆ ಜಗತ್ ಸಿಂಗ್, ಹರೇಂದ್ರ, ಸುಮಿತ್ ಮತ್ತು ಅಮಿತ್ ಸೇರಿಕೊಂಡು ಶ್ಯಾಮವೀರ್ ಮತ್ತು ಆತನ ಸಹೋದರ ನರೇಶ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇಬ್ಬರನ್ನೂ ನಡುರಸ್ತೆಯಲ್ಲೇ ದೊಣ್ಣೆ ಮತ್ತು ಕಬ್ಬಿಣದ ರಾಡ್‌ಗಳಿಂದ ಥಳಿಸಲಾಗಿದೆ.

ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳಕ್ಕೆ ಧಾವಿಸಿ ಎರಡೂ ಕಡೆಯವರನ್ನು ಸಮಾಧಾನಪಡಿಸಿದ್ದಾರೆ. ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದು, ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಶ್ಯಾಮವೀರ್ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ. ಉಳಿದ ಆರೋಪಿಗಳನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ವಿಜಯಪುರ: ಚಿನ್ನಕ್ಕಾಗಿ ವೃದ್ಧನ ಕಿವಿ ಕತ್ತರಿಸಿ ಹತ್ಯೆ ಮಾಡಿದ ದುಷ್ಕರ್ಮಿಗಳು!

ABOUT THE AUTHOR

...view details