ನವದೆಹಲಿ:ಕೊರೊನಾದಿಂದ ದೇಶದಲ್ಲಿ ಏಪ್ರಿಲ್ 15ರ ವೇಳೆಗೆ ಸುಮಾರು 50 ಸಾವಿರ ಮಂದಿ ಸಾವನ್ನಪ್ಪುತ್ತಾರೆ ಎಂದು ಎಚ್ಚರಿಕೆ ನೀಡಿದ ವಿಡಿಯೋ ಎಲ್ಲೆಡೆ ಭೀತಿ ಮೂಡಿಸಿತ್ತು. ಆದರೆ ಈ ವಿಡಿಯೋ ಪ್ರಕಟಿಸಿದ ನಂತರ ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಇದು ನಕಲಿ. ನಾವು ಈ ಸಂದೇಶ ನೀಡಿಲ್ಲ ಎಂದಿದೆ.
50 ಸಾವಿರ ಮಂದಿ ಕೊರೊನಾಗೆ ಬಲಿಯಾಗುವ ಸುದ್ದಿ ಸುಳ್ಳು: WHO ಸ್ಪಷ್ಟನೆ - ಕೊರೊನಾಗೆ ಭಾರತದಲ್ಲಿ ಸಾವನ್ನ್ಪಪಿದವರ ಸಂಖ್ಯೆ
"ಏಪ್ರಿಲ್ 15ರ ವೇಳೆಗೆ ಭಾರತದಲ್ಲಿ 50,000 ಕೊರೊನಾದಿಂದ ಸಾವು ಸಂಭವಿಸುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ" ಎಂದು ಹೇಳುವ ವಿಡಿಯೋ ನಕಲಿ ಮತ್ತು ಸುಳ್ಳು ಸುದ್ದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಸ್ಪಷ್ಟನೆ ನೀಡಿದೆ.
ವಿಶ್ವ ಆರೋಗ್ಯ ಸಂಸ್ಥೆ
ಕೋವಿಡ್‌ನಿಂದಾಗಿ ಭಾರತದಲ್ಲಿ ಇದುವರೆಗೆ 1,65,547 ಸಾವುನೋವುಗಳು ಸಂಭವಿಸಿದೆ. ಇದು ವಿಶ್ವದ ನಾಲ್ಕನೇ ಅತಿದೊಡ್ಡ ಸಾವಿನ ಸಂಖ್ಯೆ. ಕೋವಿಡ್ ವಲ್ಡ್ ಮೀಟರ್ ಸಂಗ್ರಹಿಸಿದ ಮಾಹಿತಿಯ ಪ್ರಕಾರ, ಯುಎಸ್, ಬ್ರೆಜಿಲ್ ಮತ್ತು ಮೆಕ್ಸಿಕೊ ವಿಶ್ವದ ಒಟ್ಟು ಸಾವಿನ ಸಂಖ್ಯೆಗೆ ಅನುಗುಣವಾಗಿ ಕ್ರಮವಾಗಿ ಮೊದಲ, ಎರಡನೆಯ ಮತ್ತು ಮೂರನೇ ಸ್ಥಾನಗಳನ್ನು ಹೊಂದಿವೆ.