ಚಿಕ್ಕ ಮಕ್ಕಳ ಛಲ, ಹಟ ಎಂಥವರಿಗೂ ಸ್ಫೂರ್ತಿ ನೀಡುತ್ತದೆ. ಅವಿರತ ಪ್ರಯತ್ನದ ಬಗ್ಗೆ ವಿಡಿಯೋ ಒಂದು ನೆಟ್ಟಿಗರ ಮನಗೆದ್ದಿದೆ.
ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಏಳು ವರ್ಷದ ಮಗುವಿನ ವಿಡಿಯೋ ವೈರಲ್ ಆಗಿದೆ. ಇದನ್ನು ಐಎಎಸ್ ಅಧಿಕಾರಿ ಎಂ.ವಿ.ರಾವ್ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ಕ್ಲಿಪ್ನಲ್ಲಿ ಈ ಮಗು ಕಂಬವನ್ನು ಏರಲು ಪ್ರಯತ್ನಿಸುತ್ತದೆ. ಹಲವಾರು ಬಾರಿ ಜಾರಿ ಬಿದ್ದರು ಸಹ ಪದೆ ಪದೆ ಪ್ರಯತ್ನಿಸಿ ಕೊನೆಗೂ ಕಂಬ ಹತ್ತುವಲ್ಲಿ ಯಶಸ್ವಿಯಾಗುತ್ತದೆ.
ಕ್ಲಿಪ್‌ನಲ್ಲಿರುವ ಮಗುವನ್ನು ಹಲವರು ಹುಡುಗಿ ಎಂದು ತಪ್ಪಾಗಿ ಭಾವಿಸಿದರೆ, ಕಾಮೆಂಟ್ ವಿಭಾಗದಲ್ಲಿ ಕೆಲವರು ಅದು ಲಿವರ್‌ಪೂಲ್ ಅಕಾಡೆಮಿ ಫುಟ್‌ಬಾಲ್ ಆಟಗಾರ ಅರಾಟ್ ಹೊಸೈನಿ ಎಂದು ಗುರುತಿಸಿದ್ದಾರೆ.
ಅರಾಟ್ ಸೋಷಿಯಲ್ ಮೀಡಿಯಾಕ್ಕೆ ಹೊಸಬರೇನಲ್ಲ ಮತ್ತು ಅವರ ವ್ಯಾಯಾಮದ ವಿಡಿಯೋಗಳು ಮತ್ತು ಅವರ ತಂದೆಯ ಮೇಲ್ವಿಚಾರಣೆಯಲ್ಲಿ ನಡೆಸಿದ ಸಾಹಸಗಳು ಇಂಟರ್ನೆಟ್ನಲ್ಲಿ ಛಾಪು ಮೂಡಿಸಿವೆ.