ನವದೆಹಲಿ :ಮುಂದಿನ ತಿಂಗಳು ವಿವಾಹವಾಗಲಿರುವ ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಸಭಾಪತಿ ಎಂ.ವೆಂಕಯ್ಯ ನಾಯ್ಡು (M Venkaiah Naidu) ಅವರ ಮೊಮ್ಮಗಳು ಸುಷ್ಮಾ ಅವರು ತಮ್ಮ ಮದುವೆ ವೆಚ್ಚವನ್ನು ಕಡಿತಗೊಳಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
ಸುಮಾರು 50 ಲಕ್ಷ ರೂಪಾಯಿಯನ್ನು ಹೃದಯ ಸಂಬಂಧ ಸಮಸ್ಯೆಯಿಂದ ಬಳಲುತ್ತಿರುವ ಬಡವರ ಮಕ್ಕಳ ಚಿಕಿತ್ಸೆಗಾಗಿ ದೇಣಿಗೆಯಾಗಿ ನೀಡಿದ್ದಾರೆ. ಸುಷ್ಮಾ ಅವರು 50 ಲಕ್ಷ ರೂಪಾಯಿಯ ಚೆಕ್ ಅನ್ನು 'ಹೃದಯ-ಕ್ಯೂರ್ ಎ ಲಿಟಲ್ ಹಾರ್ಟ್ ಫೌಂಡೇಶನ್' (Hrudaya-Cure a Little Heart Foundation) ಎಂಬ ಹೈದರಾಬಾದ್ ಮೂಲದ ಸಂಘಟನೆಯೊಂದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮುಖದಲ್ಲಿ ನೀಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.