ತಿರುಮಲ/ಆಂಧ್ರಪ್ರದೇಶ:ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಿರುಪತಿಗೆ ಕುಟುಂಬ ಸಮೇತ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದರು.
ಸಾಮಾನ್ಯ ಭಕ್ತರಂತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪ ರಾಷ್ಟ್ರಪತಿ - ತಿರುಪತಿಗೆ ವೆಂಕಯ್ಯ ನಾಯ್ಡು ಭೇಟಿ ಸುದ್ದಿ
ಆಂಧ್ರದ ತಿರುಪತಿ ತಿಮ್ಮಪ್ಪನ ಸನ್ನಿಧಿಗೆ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರು ತಮ್ಮ ಪರಿವಾರದ ಸದಸ್ಯರ ಜೊತೆಗೆ ತೆರಳಿ, ತಿಮ್ಮಪ್ಪನ ದರ್ಶನ ಪಡೆದಿದ್ದಾರೆ.
![ಸಾಮಾನ್ಯ ಭಕ್ತರಂತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪ ರಾಷ್ಟ್ರಪತಿ Vice president venkayya naidu visits tirumala](https://etvbharatimages.akamaized.net/etvbharat/prod-images/768-512-10878729-thumbnail-3x2-tirumala.jpg)
ತಿರುಪತಿಗೆ ವೆಂಕಯ್ಯ ನಾಯ್ಡು ದಂಪತಿ ಭೇಟಿ
ಸಾಮಾನ್ಯ ಭಕ್ತರಂತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಸಾಮಾನ್ಯ ಭಕ್ತರಂತೆ ವೈಕುಂಠ ದರ್ಶನ ದ್ವಾರದ ಮೂಲಕ ವೆಂಕಯ್ಯ ನಾಯ್ಡು ಅವರು ತಿಮ್ಮಪ್ಪನ ದರ್ಶನವನ್ನು ತಮ್ಮ ಕುಟುಂಬ ಸದಸ್ಯರೊಂದಿಗೆ ಪಡೆದರು. ಈ ವೇಳೆ ಉಪ ರಾಷ್ಟ್ರಪತಿ ದಂಪತಿಗೆ ಅರ್ಚಕರು ವೇದಾರ್ಶಿವಚನ ನೀಡಿದರು. ಹಾಗೂ ವೆಂಕಟೇಶ್ವರನ ಫೋಟೋವನ್ನು ಉಡುಗೊರೆಯಾಗಿ ಕೊಟ್ಟರು. ಪ್ರಸಾದ ಸ್ವೀಕರಿಸಿ ಮಾತನಾಡಿದ ಉಪರಾಷ್ಟ್ರಪತಿಗಳು, ದೇವರ ಬಳಿ ದೇಶದ ಜನರ ಆರೋಗ್ಯ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸಿದ್ದಾಗಿ ತಿಳಿಸಿದರು.
ಇದನ್ನೂ ಓದಿ:ತೆರಿಗೆ ಸಂಗ್ರಹಿಸಲು ಕೇಂದ್ರ ಜನರನ್ನು 'ಹಣದುಬ್ಬರದ ಕೆಸರಿನ ಹೊಂಡಕ್ಕೆ' ತಳ್ಳುತ್ತಿದೆ: ರಾಗಾ ಕೆಂಡಾಮಂಡಲ
Last Updated : Mar 5, 2021, 4:07 PM IST