ಕರ್ನಾಟಕ

karnataka

ETV Bharat / bharat

ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲು ಸಂಸದರಿಗೆ ಉಪರಾಷ್ಟ್ರಪತಿ ಕರೆ

ಎಲ್ಲಾ ಸಂಸತ್ ಸದಸ್ಯರಿಗೆ (ಸಂಸದರು) ಬರೆದ ಮೂರು ಪುಟಗಳ ಪತ್ರದಲ್ಲಿ, ಮನೆಯಲ್ಲಿ ಮಾತೃಭಾಷೆಯ ಬಲವಾದ ಅಡಿಪಾಯ ಮತ್ತು ಕೌಶಲ್ಯಗಳ ಮಹತ್ವವನ್ನು ವಿವರಿಸಿರುವ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ಕರೆ ನೀಡಿದ್ದಾರೆ.

ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲು ಸಂಸದರಿಗೆ ಕರೆ ಕೊಟ್ಟ ಉಪರಾಷ್ಟ್ರಪತಿ
ಸ್ಥಳೀಯ ಭಾಷೆಗಳನ್ನು ಉತ್ತೇಜಿಸಲು ಸಂಸದರಿಗೆ ಕರೆ ಕೊಟ್ಟ ಉಪರಾಷ್ಟ್ರಪತಿ

By

Published : Feb 20, 2021, 10:43 AM IST

ನವದೆಹಲಿ: ಮಾತೃಭಾಷೆಯನ್ನು 'ಜೀವನದ ಆತ್ಮ' ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಬಣ್ಣಿಸಿದ್ದಾರೆ. ಸಂಸತ್ತಿನ ಎಲ್ಲ ಸದಸ್ಯರಿಗೆ ಭಾರತೀಯ ಭಾಷೆಗಳ ಸಂರಕ್ಷಣೆ ಮತ್ತು ಉತ್ತೇಜನಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ಕರೆ ನೀಡಿದ್ದಾರೆ.

ಫೆಬ್ರವರಿ 21 ರಂದು 'ಅಂತಾರಾಷ್ಟ್ರೀಯ ಮಾತೃಭಾಷಾ ದಿನಾಚರಣೆ' ಆಚರಿಸಲಾಗುತ್ತದೆ. ನಾಯ್ಡು ಅವರು ಲೋಕಸಭೆ ಮತ್ತು ರಾಜ್ಯಸಭೆಯ ಎಲ್ಲ ಸದಸ್ಯರಿಗೆ ಫೆಬ್ರವರಿ 16 ರಂದು ಇಂಗ್ಲಿಷ್ ಜೊತೆಗೆ ವ್ಯಾಪಕವಾಗಿ ಮಾತನಾಡುವ ಭಾರತೀಯ ಭಾಷೆಗಳಲ್ಲಿ ಮಾತೃಭಾಷೆಯನ್ನು ರಕ್ಷಿಸುವಂತೆ ಪತ್ರ ಬರೆದಿದ್ದಾರೆ.

ಎಲ್ಲಾ ಸಂಸತ್ ಸದಸ್ಯರಿಗೆ (ಸಂಸದರು) ಬರೆದ ಮೂರು ಪುಟಗಳ ಪತ್ರದಲ್ಲಿ, ಮನೆಯಲ್ಲಿ ಮಾತೃಭಾಷೆಯ ಬಲವಾದ ಅಡಿಪಾಯ ಮತ್ತು ಕೌಶಲ್ಯಗಳ ಮಹತ್ವವನ್ನು ವಿವರಿಸಿದ್ದಾರೆ. ಮಕ್ಕಳಿಗೆ ಮೊದಲು ಮಾತೃಭಾಷೆ ಕಲಿಸಿ. ಆನಂತರ ಉತ್ತಮ ಶೈಕ್ಷಣಿಕ ಸಾಧನೆಗಾಗಿ ಎರಡನೇ ಭಾಷೆಯನ್ನು ಕಲಿಯಲು ಸಹಕರಿಸಿ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಒಆರ್​ಒಪಿ ಪರಿಶೀಲನೆ ಬಗ್ಗೆ ರಕ್ಷಣಾ ಸಚಿವಾಲಯದ ಉನ್ನತ ಅಧಿಕಾರಿಗಳನ್ನು ಪ್ರಶ್ನಿಸಿದ ರಾಹುಲ್

ಸ್ಥಳೀಯ ಭಾಷೆಗಳನ್ನು ನಿರ್ಲಕ್ಷಿಸುವುದರ ಪರಿಣಾಮದ ಬಗ್ಗೆ ವಿವರಿಸಿದ ಉಪರಾಷ್ಟ್ರಪತಿಗಳು, ಸಂಸ್ಕೃತಿ ಮತ್ತು ಭಾಷೆ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಅವು ದೀರ್ಘಕಾಲದವರೆಗೆ ಸಂಗ್ರಹವಾದ ಶ್ರೀಮಂತ ಜ್ಞಾನ ಮತ್ತು ಅಭ್ಯಾಸಗಳನ್ನು ಸಾಕಾರಗೊಳಿಸುತ್ತವೆ. ಒಂದು ಭಾಷೆಯ ಅಳಿವು ಅಮೂಲ್ಯವಾದ ಪರಂಪರೆಯನ್ನು ಕಳೆದುಕೊಳ್ಳುತ್ತದೆ. ನಮ್ಮ ಸಂಸ್ಕೃತಿ ಉಳಿಯ ಬೇಕೆಂದರೆ ಮಾತೃಭಾಷೆಗೆ ಒತ್ತ ನೀಡುವುದು ಅತಿ ಮುಖ್ಯ. ದೇಶದ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯನ್ನು ಕಾಪಾಡಲು ಸ್ಥಳೀಯ ಭಾಷೆಗಳನ್ನು ಉತ್ತೇಜಿಸುವ ಅಗತ್ಯವನ್ನು ನಾಯ್ಡು ಒತ್ತಿ ಹೇಳಿದ್ದಾರೆ.

ಭಾರತವು ವೈವಿಧ್ಯತೆಯಲ್ಲಿ ಏಕತೆಯನ್ನು ನಿರೂಪಿಸುವ ಹಲವಾರು ಭಾಷೆಗಳು ಮತ್ತು ಸಂಸ್ಕೃತಿಗಳ ಮೊಸಾಯಿಕ್ ಆಗಿರುವುದಕ್ಕೆ ನಾವು ಹೆಮ್ಮೆ ಪಡುತ್ತೇವೆ. ನಮ್ಮ ವೈವಿಧ್ಯಮಯ ಸಂಸ್ಕೃತಿಗಳ ಸಮೃದ್ಧಿಯನ್ನು ತಾಯಿಭಾಷೆಯ ಪ್ರಚಾರದ ಮೂಲಕ ಮಾತ್ರ ಸಂರಕ್ಷಿಸಬಹುದು. ಸುಮಾರು 200 ಭಾರತೀಯ ಭಾಷೆಗಳು ಅಳಿವಿನಂಚನ್ನು ಎದುರಿಸುತ್ತಿವೆ ಮತ್ತು ಪ್ರತಿ ಎರಡು ವಾರಗಳಿಗೊಮ್ಮೆ ಒಂದು ವಿಶ್ವ ಭಾಷೆ ಅಳಿವಿನಂಚಿನಲ್ಲಿರುವ ಬಗ್ಗೆ ಯುಎನ್‌ಒ ಕಳವಳ ವ್ಯಕ್ತಪಡಿಸುತ್ತಿದೆ ಎಂದು ನಾಯ್ಡು ಸಂಸದರಿಗೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details