ಹೈದರಾಬಾದ್ :ಜಗತ್ತಿಗೇ ಹೈದರಾಬಾದ್ ಜೈವಿಕ ತಂತ್ರಜ್ಞಾನದ ಹಬ್ ಆಗಿ ಬದಲಾಗುತ್ತಿದೆ. ಭಾರತ್ ಬಯೋಟೆಕ್ ದೇಶದ ಭಾಗವಾಗಿದೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರ ಎಂದು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಸಂತಸ ವ್ಯಕ್ತಪಡಿಸಿದ್ದಾರೆ.
ಭಾರತ್ ಬಯೋಟೆಕ್ ದೇಶದ ಭಾಗವಾಗಿದೆ ಎಂಬುದು ಅತ್ಯಂತ ಹೆಮ್ಮೆ - ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು - ಹೈದರಾಬಾದ್
ನಮ್ಮ ವಿಜ್ಞಾನಿಗಳು ಅನೇಕ ದೇಶಗಳ ಜನರ ಪ್ರಾಣ ಉಳಿಸುತ್ತಿದ್ದಾರೆ. ಇಂಡಿಯಾ ಬಯೋಟೆಕ್ ಈವರೆಗೆ 4 ಬಿಲಿಯನ್ (400 ಕೋಟಿ)ಗೂ ಅಧಿಕ ಲಸಿಕೆಗಳನ್ನು ವಿತರಿಸಿದೆ. ಈವರೆಗೆ 16 ಬಗೆಯ ಲಸಿಕೆಗಳನ್ನು ಉತ್ಪಾದಿಸಿರುವುದು ಶ್ಲಾಘನೀಯ..
ಭಾರತ್ ಬಯೋಟೆಕ್ ದೇಶದ ಭಾಗವಾಗಿದೆ ಎಂಬುದು ಅತ್ಯಂತ ಹೆಮ್ಮೆಯ ವಿಚಾರ - ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು
ಜೀನೋಮ್ ಕಣಿವೆಯಲ್ಲಿರುವ ಕೋವ್ಯಾಕ್ಸಿನ್ ಲಸಿಕೆ ತಯಾರಿಕಾ ಸಂಸ್ಥೆ ಭಾರತ್ ಬಯೋಟೆಕ್‌ಗೆ ವೆಂಕಯ್ಯ ನಾಯ್ಡು ಅವರು ಇಂದು ಭೇಟಿ ನೀಡಿದ್ದರು. ಇಲ್ಲಿಗೆ ಬಂದಿರುವುದರಿಂದ ಸಂತೋಷವಾಗಿದೆ ಎಂದಿದ್ದಾರೆ.
ನಮ್ಮ ವಿಜ್ಞಾನಿಗಳು ಅನೇಕ ದೇಶಗಳ ಜನರ ಪ್ರಾಣ ಉಳಿಸುತ್ತಿದ್ದಾರೆ. ಇಂಡಿಯಾ ಬಯೋಟೆಕ್ ಈವರೆಗೆ 4 ಬಿಲಿಯನ್ (400 ಕೋಟಿ)ಗೂ ಅಧಿಕ ಲಸಿಕೆಗಳನ್ನು ವಿತರಿಸಿದೆ. ಈವರೆಗೆ 16 ಬಗೆಯ ಲಸಿಕೆಗಳನ್ನು ಉತ್ಪಾದಿಸಿರುವುದು ಶ್ಲಾಘನೀಯ. ಕೇಂದ್ರ ಸಚಿವರಾಗಿದ್ದಾಗ ಭಾರತ್ ಬಯೋಟೆಕ್‌ಗೆ ಭೇಟಿ ನೀಡಿದ್ದನ್ನು ಇದೇ ವೇಳೆ ನಾಯ್ಡು ಅವರು ನೆನಪಿಸಿಕೊಂಡರು.