ಹೈದರಾಬಾದ್ :ನ್ಯಾಯಾಂಗವನ್ನು ಸ್ಥಳೀಯ ಭಾಷೆ ಮಾತನಾಡುವವರಿಗೆ ಲಭ್ಯವಾಗುವಂತೆ ಮಾಡುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಕರೆ ನೀಡಿದರು.
ಮಾತೃಭಾಷೆಗಳ ರಕ್ಷಣೆ ಕುರಿತಂತೆ ತೆಲುಗು ಕುಟಾಮಿ ಆಯೋಜಿಸಿದ್ದ ವರ್ಚುವಲ್ ಸಮ್ಮೇಳನ ಉದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ನಡೆದ ಪ್ರಕರಣವೊಂದರಲ್ಲಿ ಮುಖ್ಯ ನ್ಯಾಯಾಧೀಶ ಎನ್ ವಿ ರಮಣರವರು ಕೋರ್ಟ್ನಲ್ಲಿ ಮಹಿಳೆಯೋರ್ವರಿಗೆ ಅವರ ಮಾತೃಭಾಷೆ ತೆಲುಗಿನಲ್ಲಿ ಮಾತನಾಡಲು ಅವಕಾಶ ಮಾಡಿ ಕೊಟ್ಟಿದ್ದರು.
ಈ ಘಟನೆಯು ನ್ಯಾಯಾಧೀಶರು ಸಮಸ್ಯೆಗಳನ್ನು ತಮ್ಮ ಮಾತೃಭಾಷೆಯಲ್ಲಿ ವ್ಯಕ್ತಪಡಿಸಲು ಅವಕಾಶ ನೀಡುವ ಅಗತ್ಯವನ್ನು ಒತ್ತಿ ಹೇಳಿದರು. ಇದರ ಜೊತೆಗ ತೀರ್ಪುಗಳನ್ನು ಸಹ ಪ್ರಾದೇಶಿಕ ಭಾಷೆಯಲ್ಲಿಯೇ ನೀಡುವಂತೆ ಆಗಬೇಕು ಎಂದರು.
ಮಾತೃಭಾಷೆಯ ನಷ್ಟವು ನಮ್ಮ ಸ್ವಾಭಿಮಾನ ಮತ್ತು ಗುರುತಿಸುವಿಕೆಯನ್ನು ಕಳೆದುಕೊಂಡಂತೆ. ನಮ್ಮ ಪರಂಪರೆಯ ಸಂಗೀತ, ನೃತ್ಯ, ನಾಟಕ, ಸಂಪ್ರದಾಯಗಳು, ಹಬ್ಬಗಳು, ಸಾಂಪ್ರದಾಯಿಕ ಜ್ಞಾನ ಮೊದಲಾದ ಅಂಶಗಳನ್ನು ರಕ್ಷಣೆ ಮಾತೃಭಾಷೆಯ ಸಂರಕ್ಷಣೆಯಿಂದ ಮಾತ್ರ ಸಾಧ್ಯ ಎಂದರು.