ಬೆಮೆತಾರಾ (ಛತ್ತೀಸ್‌ಗಢ): ಜಿಲ್ಲೆಯಲ್ಲಿ ಇಬ್ಬರು ಮಕ್ಕಳ ನಡುವಿನ ಮಾರಾಮಾರಿ ಕೋಮುಗಲಭೆಯ ಸ್ವರೂಪ ಪಡೆದುಕೊಂಡಿದೆ. ಶನಿವಾರ ಮಧ್ಯಾಹ್ನ ಸಾಜಾ ಪೊಲೀಸ್ ಠಾಣಾ ವ್ಯಾಪ್ತಿಯ ಬಿರಾನ್‌ಪುರ ಗ್ರಾಮದಲ್ಲಿ ನಡೆದ ಇಬ್ಬರು ಮಕ್ಕಳ ನಡುವಿನ ಜಗಳ ದೊಡ್ಡ ಕೋಮು ಸ್ವರೂಪ ಪಡೆದುಕೊಂಡಿದೆ. ಹೊಡೆದಾಟದ ವೇಳೆ ಗ್ರಾಮದ ಯುವಕನೊಬ್ಬ ಮೃತಪಟ್ಟಿದ್ದಾರೆ. ಅಂದಿನಿಂದ ಈ ವಿಷಯ ಆ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಾಗಿದೆ. ಅಷ್ಟೇ ಅಲ್ಲ, ಬೆಮೆತಾರಾ ಘಟನೆಯನ್ನು ವಿರೋಧಿಸಿ ಇಂದು ಕೆಲ ಸಂಘಟನೆಗಳು ಛತ್ತೀಸ್‌ಗಢ ಬಂದ್‌ಗೆ ಕರೆ ನೀಡಿವೆ.
ಇಬ್ಬರು ಮಕ್ಕಳು ಪರಸ್ಪರ ಹೊಡೆದಾಡಿಕೊಂಡ ಘಟನೆ ಶನಿವಾರ ಸಜಾ ಗ್ರಾಮದ ಬೀರನಪುರದಲ್ಲಿ ನಡೆದಿದೆ. ನಂತರ ಈ ವಿಷಯ ಮಕ್ಕಳ ಮನೆಗೆ ತಲುಪಿದಾಗ ಜಗಳ ಮತ್ತಷ್ಟು ವಿಕೋಪಕ್ಕೆ ತಿರುಗಿದೆ. ನಂತರ ಎರಡೂ ಕಡೆಯವರ ನಡುವೆ ಮಾರಾಮಾರಿ ನಡೆದಿದೆ. ಹಿಂಸಾಚಾರದಲ್ಲಿ ಭುನೇಶ್ವರ್ ಸಾಹು ಎಂಬ ಯುವಕ ಸಾವನ್ನಪ್ಪಿದ್ದು, ಹತ್ಯೆಯಿಂದ ಗ್ರಾಮದಲ್ಲಿ ವಾತಾವರಣ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಈಗ ಹಿಂಸಾಚಾರ ನಡೆದ ಗ್ರಾಮವನ್ನು ಕಂಟೋನ್ಮೆಂಟ್ ಆಗಿ ಪರಿವರ್ತಿಸಲಾಗಿದೆ. ಘಟನೆಯಲ್ಲಿ ರಕ್ಷಿಸಲು ಬಂದ ಸಜಾ ಪೊಲೀಸ್ ಠಾಣೆಯ ಮೂವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಸಜಾ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಗಾಯಗೊಂಡ ಪೊಲೀಸರಿಗೆ ಚಿಕಿತ್ಸೆ ನಡೆಯುತ್ತಿದೆ. ಘಟನೆಯಲ್ಲಿ ಭಾಗಿಯಾಗಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರೆಲ್ಲರೂ ಒಂದೇ ಸಮುದಾಯಕ್ಕೆ ಸೇರಿದವರು. ಅಷ್ಟೇ ಅಲ್ಲ, ಮುನ್ನೆಚ್ಚರಿಕೆ ಕ್ರಮವಾಗಿ ಗ್ರಾಮದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಬೆಮೆತಾರಾ ಹೊರತುಪಡಿಸಿ ಕವರ್ಧಾ, ಬಿಲಾಸ್‌ಪುರ, ರಾಜನಂದಗಾಂವ್, ದುರ್ಗ್ ಜಿಲ್ಲೆಗಳ ಪೊಲೀಸ್ ಪಡೆಗಳನ್ನು ಸಹ ಸ್ಥಳದಲ್ಲಿ ನಿಯೋಜಿಸಲಾಗಿದೆ.