ಸೂರತ್(ಗುಜರಾತ್):ಹುಡುಗಿಯೊಬ್ಬಳಿಗೆ ಅನ್ಯ ಸಮುದಾಯದ ಯುವಕನೊಬ್ಬ ಕಿರುಕುಳ ನೀಡಿದ ಆರೋಪ ಇಲ್ಲಿನ ವೇಸು ಪ್ರದೇಶದ ಮಹಾವೀರ ಕಾಲೇಜಿನಲ್ಲಿ ಕೇಳಿಬಂದಿತ್ತು. ಈ ಹಿನ್ನೆಲೆ ಇಂದು ಸುಮಾರು ಎಂಟರಿಂದ ಒಂಬತ್ತು ಮಂದಿ ಸಂಘಟನೆಯೊಂದಕ್ಕೆ ಸೇರಿದ ಕಾರ್ಯಕರ್ತರು ಕ್ಯಾಂಪಸ್ಗೆ ಪ್ರವೇಶಿಸಿ ಯುವಕನಿಗೆ ಥಳಿಸಿದ್ದಾರೆ. ಘಟನೆಗೆ ಸಂಬಂಧಿಸಿದ ವಿಡಿಯೋ ಲಭಿಸಿದೆ.
ಈ ಬಗ್ಗೆ ಸಂಘಟನೆಯೊಂದರ ರಾಷ್ಟ್ರೀಯ ಖಜಾಂಚಿ ದಿನೇಶ್ ನವ್ಡಿಯಾ ಮಾತನಾಡಿ, 'ಮೊದಲನೆಯದಾಗಿ ನಾನು ಇದನ್ನು ದಾಳಿ ಎಂದು ಕರೆಯುವುದಿಲ್ಲ; ಇದು ಕೇವಲ ಆತ್ಮರಕ್ಷಣೆಗಾಗಿ ತೆಗೆದುಕೊಂಡ ಕ್ರಮ ಎಂದು ಸಮರ್ಥಿಸಿಕೊಂಡಿದ್ದಾರೆ.