ಚೆನ್ನೈ(ತಮಿಳುನಾಡು): ತಮಿಳುನಾಡಿನಲ್ಲಿ 'ಯೋಗ ಪಾಟಿ' ಎಂದೇ ಪ್ರಸಿದ್ಧಿ ಪಡೆದ ನಾನಮ್ಮಳ್ ಅವರನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ತನ್ನ 11ನೇ ತರಗತಿಯ ಪಠ್ಯವೊಂದರಲ್ಲಿ ಸೇರ್ಪಡೆ ಮಾಡಿದೆ.
11ನೇ ತರಗತಿಯ ದೈಹಿಕ ಶಿಕ್ಷಣ ಪಠ್ಯಕ್ರಮದಲ್ಲಿ ನಾನಮ್ಮಳ್ ಅವರನ್ನು ಪರಿಚಯಿಸಲಾಗಿದೆ. ಅವರಿಗೆ ಭಾರತದ ಅತ್ಯಂತ ಹಿರಿಯ ಯೋಗ ಶಿಕ್ಷಕಿ ಎಂಬ ಮಾನ್ಯತೆಯನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ನೀಡಿದೆ.
ಸಿಬಿಎಸ್ಇ ಪಠ್ಯದಲ್ಲಿ ದೇಶದ ಅತ್ಯಂತ ಹಿರಿಯ ಯೋಗ ಶಿಕ್ಷಕಿ ನಾನಮ್ಮಳ್ ನಾನಮ್ಮಳ್ ಬಗ್ಗೆ..
ನಾನಮ್ಮಳ್ 1920ರಲ್ಲಿ ಕೊಯಮತ್ತೂರಿನ ಸಮೀಪದಲ್ಲಿರುವ ಪುಟ್ಟ ಹಳ್ಳಿಯಲ್ಲಿ ಜನಿಸಿದ್ದು, 10 ವರ್ಷ ವಯಸ್ಸಿನವರು ಇರುವವಾಗಲೇ ಯೋಗಾಭ್ಯಾಸವನ್ನು ಆರಂಭಿಸಿದ್ದರು. 2019ರಲ್ಲಿ ಮೃತಪಟ್ಟ ಆಕೆ ಸುಮಾರು 45 ವರ್ಷದಲ್ಲಿ 10 ಲಕ್ಷಕ್ಕೂ ಹೆಚ್ಚು ಮಂದಿಗೆ ಯೋಗ ತರಬೇತಿ ನೀಡಿದ್ದರು.
ಆಕೆಯ ತರಬೇತಿ ನೀಡಿದ 600ಕ್ಕೂ ಹೆಚ್ಚು ಮಂದಿ ವಿಶ್ವದಾದ್ಯಂತ ಯೋಗ ಶಿಕ್ಷಕರಾಗಿ ಮತ್ತು ಸಲಹೆಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಾನಮ್ಮಳ್ ಅವರ ಸಾಧನೆಗೆ ಕೇಂದ್ರ ಸರ್ಕಾರ 2016ರಲ್ಲಿ ನಾರಿ ಶಕ್ತಿ ಪುರಸ್ಕಾರ ಮತ್ತು 2018ರಲ್ಲಿ ಪದ್ಮಶ್ರೀ ಪುರಸ್ಕಾರ ನೀಡಿ ಗೌರವಿಸಿದೆ.
ಇದನ್ನೂ ಓದಿ:ಜಗತ್ತು ಹೆಚ್ಚು ಚಿಂತೆ ಮಾಡುವ ವಿಚಾರ ಯಾವುದು?: ಇಲ್ಲಿದೆ ಸರ್ವೇ..!